ಆಕಾಶದಂತೆ ವಿಶಾಲವಾಗಿರುವ
ಎಳೆ ನೀರಿಂತೆ ಸಿಹಿಯಾಗಿರುವ
ತಣ್ಣನೆ ಗಾಳಿಯಂತೆ ಗೋಚರವಾಗಿರುವ
ಸಮುದ್ರದ ನೀರಿನಂತೆ ಪರಿಶುದ್ಧವಾಗಿರುವ
ನಿಷ್ಕಲ್ಮಶವಾಗಿರುವುದು ಅಪ್ಪನ ಹೃದಯ
ತಾ ಕಂಡ ಕನಸು ನನಸಾಗಿಸದೆ
ತನ್ನವರ ಕನಸಿಗೆ ಜೀವಿಸಿರದೆ
ಸುಖ ದುಃಖಗಳಿಗೆ ನಿರಾಶಿತನಾಗದೆ
ಪ್ರೀತಿ ಪ್ರೇಮ ತುಂಬಿ ದ್ವೇಷ ಅಸೂಯೆ ಹೋಗಲಾಡಿಸಿದೆ ಅಪ್ಪನ ಹೃದಯ
ಮನನೊಂದುಕೊಳ್ಳುವ ದೃಶ್ಯಗಳಿಗೆ ಮರಗುವ
ಉತ್ತಮ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹಿಸುವ
ಕೆಲವೊಮ್ಮೆ ಸಣ್ಣ ವಿಷಯಗಳಿಗೆ ಭಾವುಕನಾಗುವ
ಸಕಲ ಜೀವರಾಶಿಗಳಿಗೆ ಒಳ್ಳೆಯದು ಬಯಸುವ
ಒತ್ತಡದ ಬದುಕಿಗೆ ಉದ್ವೇಗವಾಗುವುದು ಅಪ್ಪನ ಹೃದಯ
ಪರಮಾತ್ಮನಂತೆ ನಿಷ್ಠಾವಂತನಿರುವ
ಬೆಟ್ಟದಂತೆ ವಿಶಾಲವಾಗಿರುವ
ಸಮುದ್ರದ ಅಲೆಗಳಂತೆ ಅಪ್ಪಳಿಸುವ
ಸಪ್ತ ಸಾಗರಗಳಿಗೆ ಸಾಕ್ಷಿಯಾಗಿರುವುದು ಅಪ್ಪನ ಹೃದಯ
- ಅನುರಾಧ ಡಿ ಸನ್ನಿ ಹೂಲಗೇರಿ
