
ಬೀದರ್/ ಬಸವಕಲ್ಯಾಣ : ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ನಿಂತಿರುವ ಸ್ವಚ್ಛ ವಾಹಿನಿಯಲ್ಲಿ ಮಕ್ಕಳು ಒಳಗಡೆ ಅಡಗಿ ಕುಳಿತುಕೊಳ್ಳುವುದರ ಮೂಲಕ ಇದು ನಮ್ಮ ಆಟಿಕೆ ವಾಹಿನಿಯಾಗಿದೆ ಎಂದು ವ್ಯಂಗವಾಡುವ ಮೂಲಕ ಜನರಿಗೆ ತೋರಿಸುತ್ತಿದ್ದರು, ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾಗಲಿ ಯಾರೊಬ್ಬರೂ ಸಹ ಆ ಕಡೆ ನಿಗಾ ವಹಿಸುತ್ತಿಲ್ಲ, ಅದಲ್ಲದೇ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುವ ಸ್ವಚ್ಛತೆ ಕಾರ್ಮಿಕರು ಎಲ್ಲೆಂದರಲ್ಲಿ ರಸ್ತೆ ಮೇಲೆ ಕಸ ಗೂಡಿಸಿ ಅಲ್ಲಿಯೇ ಬೆಂಕಿ ಹಚ್ಚಿ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಮಾಡುವ ಬೀದಿ ವ್ಯಾಪಾರಸ್ತರಿಗೆ ಹಾಗೂ ಸಾರ್ವಜನಿಕರಿಗೆ, ರಸ್ತೆ ಮೇಲೆ ದಿನ ನಿತ್ಯ ಓಡಾಡುವ ನೂರಾರು ವಾಹನಗಳಿಗೆ ಮತ್ತು ಸ್ಥಳಿಯ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಅದಲ್ಲದೇ ಇವರು ಗ್ರಾಮ ಪಂಚಾಯತಿಯಲ್ಲಿ ಸ್ಚಚ್ಛ ವಾಹಿನಿ ಇಟ್ಟಿದ್ದಾದರೂ ಏಕೆ? ಎಂದು ಬಗದುರಿಯ ಗ್ರಾಮದ ಸ್ಥಳಿಯರಾದ ಶ್ರೀ ಪ್ರಶಾಂತ ಬಿರಾದಾರ ರವರು ಪತ್ರಿಕಾ ಪ್ರಕಟಣೆಯಲ್ಲಿ ಹಂಚಿಕೊಂಡಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ
