ಬಳ್ಳಾರಿ / ಕಂಪ್ಲಿ : ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಅಂಬೇಡ್ಕರ್ ಸಂಘ ಮತ್ತು ಮಾದಿಗ ಸಮಾಜದ ಸಹಯೋಗದೊಂದಿಗೆ ಪಟ್ಟಣದಲ್ಲಿ ವಿಜೃಂಭಣೆಯಿಂದ ಬೃಹತ್ ಸಾಂಸ್ಕೃತಿಕ ಮೆರವಣಿಗೆ ಬುಧವಾರ ಜರುಗಿತು.
ಇಲ್ಲಿನ 4ನೇ ವಾರ್ಡಿನ ಅಂಬೇಡ್ಕರ್ ನಗರದಲ್ಲಿ ಆರಂಭಗೊಂಡ ಭಾವಚಿತ್ರ ಮೆರವಣಿಗೆ ನಾಲ್ಕನೇ ವಾರ್ಡ್ ಶಾಲೆ, ಸಂತೆ ಮಾರುಕಟ್ಟೆ, ನಡುವಲ ಮಸೀದಿ, ಡಾ. ರಾಜಕುಮಾರ್ ಮುಖ್ಯರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ, ದಿ. ಪುನೀತ್ ರಾಜಕುಮಾರ್ ವೃತ್ತದ ಮೂಲಕ ಮರಳಿ ಅಂಬೇಡ್ಕರ್ ನಗರದಲ್ಲಿ ತೆರಳಿ ಸಮಾವೇಶಗೊಂಡಿತು.
ಧ್ವನಿ ವರ್ಧಕದ ಹಾಡಿಗೆ (DJ) ಯುವಕರು, ಮಹಿಳೆಯರು, ಮಕ್ಕಳು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ಭಾರತರತ್ನ ಅಂಬೇಡ್ಕರ್ ಸಂಘದ ನೂತನ ತಾಲೂಕು ಅಧ್ಯಕ್ಷ ಎಸ್. ರುದ್ರಮುನಿ ಇವರು ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಭಾರತದ ಸಾಮಾಜಿಕ ಸಮಾನತೆಯ ಹರಿಕಾರ, ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಗಾದ ದೀನ ದಲಿತರ ಏಳಿಗೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಅವರ ಆದರ್ಶಗಳು ಎಲ್ಲಾ ವರ್ಗದ ಜನರಿಗೂ ಮಾದರಿಯಾಗಿವೆ. ಸಂವಿಧಾನದ ಮೂಲಕ ಭಾರತವನ್ನು ಸಮಾನತೆ, ಸಮತೆ, ಭ್ರಾತೃತ್ವ ಮತ್ತು ಜಾತ್ಯತೀತ ಪರಿಕಲ್ಪನೆಗಳ ಅಡಿಯಲ್ಲಿ ನಿರ್ಮಿಸುವುದಕ್ಕೆ ಅಡಿಪಾಯ ಹಾಕಿದರು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮಾರುತಿ, ವಿಜಯ, ಗೌರವಾಧ್ಯಕ್ಷ ಕೆ.ಹುಲುಗಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಹೊನ್ನೂರ, ಖಜಾಂಚಿ ಮಹೇಶ, ಸಹ ಕಾರ್ಯದರ್ಶಿ ತಿಪ್ಪೇಸ್ಚಾಮಿ, ಸಂಘಟನಾ ಸಲಹೆಗಾರರಾದ ಯಲ್ಲಪ್ಪ, ಹುಲುಗಪ್ಪ, ಕನಕಪ್ಪ, ಬಾಬು, ಹನುಮಂತ, ರಾಘವೇಂದ್ರ, ಶೇಖರ, ಕರೆಣ್ಣ, ಬಬ್ಬಿ, ಮುಖಂಡರಾದ ರಾಜಪ್ಪ, ಶಿವಣ್ಣ, ಜಂಭಣ್ಣ, ಅಂಬಣ್ಣ, ಹೊನ್ನೂರಪ್ಪ, ಗಾಳೇಶ, ಕರ‍್ರೆಪ್ಪ, ದೊಡ್ಡ ಹುಸೇನಿ, ರೇಣುಕಾ, ನಾಗರಾಜ, ದೊಡ್ಡ ವಿರುಪಣ್ಣ, ತಾಯಪ್ಪ, ಜಿ.ರಾಮಣ್ಣ, ವೀರಾಂಜನೇಯ, ಡಿಸ್ ಪ್ರಸಾದ್, ಎನ್.ಗಂಗಣ್ಣ, ಶ್ರೀನಿವಾಸ, ವೆಂಕಟೇಶ, ಓಬಳೇಶ, ವೆಂಕಟೇಶ, ಆರ್. ಎಂ. ರಾಮಯ್ಯ ಸೇರಿದಂತೆ ಮಹಿಳೆಯರು ಹಾಗೂ ಮಾದಿಗ ಸಮಾಜದವರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
