ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು,
ಹಡಗಲಿ ಪ್ರವಾಸಿ ಮಂದಿರದಲ್ಲಿ ಕೆ. ಎಸ್. ಈಶ್ವರ ಗೌಡ್ರು ರವರಿಗೆ ರಾಜ್ಯ ಮಟ್ಟದಲ್ಲಿ ಉನ್ನತ ಪದವಿ ನೀಡಬೇಕೆಂದು ಬಿ ಜೆ ಪಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸಂಜೀವ್ ರೆಡ್ಡಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಎಂ. ಮಲ್ಲಿಕಾರ್ಜುನ್ ರವರು ಮಾತನಾಡಿ
ಕೆ. ಎಸ್. ಈಶ್ವರ ಗೌಡ್ರು ನಮ್ಮೆಲ್ಲರ ನೆಚ್ಚಿನ ನಾಯಕರಾಗಿ ಸದಾ ಕಾರ್ಯಕರ್ತರಿಗೆ ಸ್ಪಂದಿಸುತ್ತಾ ಕೊಟ್ಟೂರು ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಸುಮಾರು ದಿನಗಳಿಂದ ಬಿ ಜೆ ಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಇವರು ಬಿ ಜೆ ಪಿ ಹಾಲಿ ಕೊಟ್ಟೂರು ಪಟ್ಟಣ ಪಂಚಾಯಿತಿ ಸದಸ್ಯರಾಗಿ ಸದಾ ಪಕ್ಷಕ್ಕಾಗಿ ದುಡಿಯುತ್ತಿರುವ ಇವರು ಹಿಂದಿನ ದಿನಗಳಲ್ಲಿ ತಾಲೂಕು ಹೋರಾಟ, ರೈಲ್ವೆ ಹೋರಾಟ, ಕೆರೆಗೆ ನೀರು ತುಂಬಿಸುವ ಜನಪರ ಹೋರಾಟಗಳಲ್ಲಿ ಮುಂಚೂಣಿ ನಾಯಕತ್ವವನ್ನು ಹೊಂದಿರುತ್ತಾರೆ.
ಕೆ ಎಸ್ ಈಶ್ವರ ಗೌಡ್ರನ್ನು ರಾಜ್ಯ ಸಮಿತಿಯಲ್ಲಿ ಸೇರಿಸಿದರೆ ಅವರಿಗೆ ಮತ್ತಷ್ಟು ಬಲ ಕೊಡುವುದರಿಂದ ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷ ಸಂಘಟನೆಯಾಗುತ್ತದೆ ಎಂದು ಹೇಳಿದರು.
ರಾಜ್ಯ ಸಮಿತಿಯವರು ರಾಜ್ಯ ಸಮಿತಿಯಲ್ಲಿ ಕೂಡಲೇ ಇವರನ್ನು ಸೇರಿಸಿಕೊಂಡು ಬಿ ಜೆ ಪಿ ಪಕ್ಷ ಬಲಪಡಿಸಿ ಕೊಳ್ಳಲು ಕೆ ಎಸ್ ಈಶ್ವರ ಗೌಡ್ರುಗೆ ರಾಜ್ಯ ಮಟ್ಟದಲ್ಲಿ ಉನ್ನತ ಪದವಿ ನೀಡಬೇಕೆಂದು ಜಿಲ್ಲಾಧ್ಯಕ್ಷರು ರಾಜ್ಯ ಸಮಿತಿಯವರಿಗೆ ನಮ್ಮ ಮನವಿ ಪತ್ರ ಸಲ್ಲಿಸಲು ನಮ್ಮ ಮನವಿ ನೀಡಿ ಆಗ್ರಹಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಸಂಜೀವ್ ರೆಡ್ಡಿ, ಮಂಜುನಾಥ್ ಯುವ ಘಟಕ ಅಧ್ಯಕ್ಷರು ಕೊಟ್ಟೂರು, ಮಹಾಶಕ್ತಿ ಕೇಂದ್ರ ವಿಶ್ವನಾಥ್, ಉಪಾಧ್ಯಕ್ಷರು ಕೊಟ್ಟೂರು ಮಹಾಶಕ್ತಿ ಕೇಂದ್ರ ,ಮಂಜುನಾಥ್ ಭಜಂತ್ರಿ ಹಗರಿಬೊಮ್ಮನಹಳ್ಳಿ ಮಂಡಲ ಕಾರ್ಯದರ್ಶಿ, ಚಂದ್ರು ಜಂಬೂರ್
ಪ್ರಧಾನ ಕಾರ್ಯದರ್ಶಿ ಕೊಟ್ಟೂರು ಮಹಾಶಕ್ತಿ ಕೇಂದ್ರ,
ಅಶೋಕ್ ಉಪಾಧ್ಯಕ್ಷರು ರೈತ ಘಟಕ ಹಗರಿಬೊಮ್ಮನಹಳ್ಳಿ ಮಂಡಲ ಸೇರಿದಂತೆ ಹಲವರು ಹಾಜರಿದ್ದರು.
ವರದಿ ಪಿ. ಶಶಾಂಕ್
