ಯಾದಗಿರಿ/ ಗುರುಮಠಕಲ್: ಯಾದಗಿರಿ ಜಿಲ್ಲೆಯಲ್ಲಿ ಒಳ ಮೀಸಲಾತಿ ಸರ್ವೆ 2025ರ ಮೇ 5 ರಿಂದ 17ರ ವರೆಗೆ ನಡೆಯುತ್ತಿದೆ, ಒಟ್ಟು 6 ತಾಲ್ಲೂಕುಗಳು 4 ವಿಧಾನಸಭಾ ಕ್ಷೇತ್ರಗಳಿದ್ದು ,ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕ ಮಟ್ಟದಲ್ಲಿ ಒಳ ಮೀಸಲಾತಿ ಸಮೀಕ್ಷೆ ಜೋರಾಗಿ ನಡೆದಿದೆ.
ಒಳಮೀಸಲಾತಿ ಎಂದರೆ ಮೀಸಲಾತಿಯೊಳಗಿನ ಮೀಸಲಾತಿ, ಮೀಸಲಾತಿ ಸೌಲಭ್ಯಗಳನ್ನು ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ (ಎಸ್ ಸಿ, ಎಸ್ ಟಿ) ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ಸಮೀಕ್ಷೆಯ ಉದ್ದೇಶ.
ಇಂದು ಗುರುಮಠಕಲ್ ಇಂದಿರಾನಗರದ ಬಡಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮತಗಟ್ಟೆ ಸಂಖ್ಯೆ 129 ರಲ್ಲಿ ಕಾರ್ಯನಿರತ ಗಣತಿದಾರರು ಶರಣಮ್ಮ ಸಿರಿಗೆಂ ಮತ್ತು BLO ವೆಂಕಟಮ್ಮ ಸಮೀಕ್ಷೆಯಲ್ಲಿ ತೊಡಗಿರುವುದು.
ವರದಿ: ಜಗದೀಶ್ ಕುಮಾರ್
