
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುಕ್ಷೇತ್ರ ರಟಕಲ ಗ್ರಾಮದಲ್ಲಿ ದಿ. 06.05.2025 ರಟಕಲ್ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಹಿರೇಮಠದಲ್ಲಿ ಶತಮಾನೋತ್ಸವದ ನಿಮಿತ್ಯವಾಗಿ ಶ್ರೀ ಮಹಾ ದಾಸೋಹಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮವನ್ನು ಟೆಂಗಿನ ಮಠದ ಮನೆತನದವರ ವತಿಯಿಂದ ಐದು ದಿನಗಳ ಪರಿಯಂತ ಹಮ್ಮಿಕೊಳ್ಳಲಾಗಿದೆ ಮತ್ತು 1001 ಜಂಗಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಪರಮ ಪೂಜ್ಯ ಶ್ರೀ ಷ . ಬ್ರ ಸಿದ್ದರಾಮ ಶಿವಾಚಾರ್ಯರು ಹರಗುರು ಮಠ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದ ಸಾನಿಧ್ಯ ಪರಮ ಪೂಜ್ಯ ಶ್ರೀ ಷ. ಬ್ರ. ರೇವಣಸಿದ್ಧ ಶಿವಾಚಾರ್ಯರು ನಡುವಿನ ಮಠ ರಟಕಲ್ ವಹಿಸಿಕೊಂಡಿದ್ದರು ಮತ್ತು ಗ್ರಾಮದ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ ಅವರು ವೇದಿಕೆಯ ಉದ್ದೇಶಿಸಿ ಮಾತನಾಡಿದರು. ವೀರಣ್ಣ ಗಂಗಾಣಿ ನಿರೂಪಿಸಿದರು ಮತ್ತು ಟೆಂಗಿನ ಮಠದ ಪರಿವಾರದವರಾದ ರಾಜಯ್ಯ ಸ್ವಾಮಿ ಟೆಂಗಿನ ಮಠ ಮತ್ತು ಮುಖಂಡರು ಗ್ರಾಮಸ್ಥರು ಮಹಿಳೆಯರು ಪುರಾಣ ಆಲಿಸಿದರು. ಪ್ರವಚನಕರಾದ ವೇ. ಮೂ. ಶ್ರೀ ಶಂಭುಲಿಂಗಯ್ಯ ಶಾಸ್ತ್ರೀಗಳು ಹಿರೇಮಠ ರಟಕಲ, ಸಂಗೀತಗಾರರು ರಾಜಕುಮಾರ ಭೂಂಯಾರ, ತಬಲ ವಾದಕರು ರಾಜಕುಮಾರ ಮಾಶಾಳಪೂರ , ಶರಣಯ್ಯ ಸ್ವಾಮಿ ಕಿಣಿ ಇತರರು ಭಾಗಿಯಾದರು.
ವರದಿ ಚಂದ್ರಶೇಖರ ಆರ್. ಪಾಟೀಲ್
