ಬಾಗಲಕೋಟೆ/ ರಬಕವಿ :
ಪಠ್ಯಪುಸ್ತಕ, ಗೈಡ್, ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರಿಸಿದ ‘ಜ್ಞಾನ ಅಂಚೆ’ ಸೇವೆ ಮೇ 01ರಿಂದ ಪ್ರಾರಂಭವಾಗಿದ್ದು, ರಬಕವಿಯ ಮುಖ್ಯ ಅಂಚೆ ಕಚೇರಿಯಲ್ಲಿ ಈ ಸೇವೆಯನ್ನು ಶಿಕ್ಷಕ, ಸಾಹಿತಿ ಚಿರಂಜೀವಿ ರೋಡಕರ್ ಇದರ ಪ್ರಯೋಜನ ಪಡೆದಿದ್ದಾರೆ.
ಅವರ ಕತಾ ಸಂಕಲನ ‘ಕೊಡಲಿ ಕಾವು’ ಕೃತಿಯ ಹನ್ನೊಂದು ಆರ್ಟಿಕಲ್ ಬುಕ್ ಮಾಡುವುದರ ಮೂಲಕ ಈ ಸೇವೆಯನ್ನು ರಬಕವಿ ಅಂಚೆ ಕಚೇರಿಯಲ್ಲಿ ಪಡೆದ ಮೊದಲಿಗ ಎನಿಸಿಕೊಂಡರು. ಜ್ಞಾನ ಅಂಚೆ ಸೇವೆಯನ್ನು ಎಲ್ಲಾ ಪ್ರಕಾಶಕರು, ಲೇಖಕರು ಇದರ ಪ್ರಯೋಜನ ಪಡೆಯಬೇಕೆಂದು ಕಚೇರಿಯ ಪೋಸ್ಟ್ ಮಾಸ್ಟರ್ ಎಸ್ ಬಿ ಗದ್ಯಾಳ ಅವರು ವಿನಂತಿಸುತ್ತಾ ನಮ್ಮ ಅಂಚೆ ಇಲಾಖೆ ಶಿಕ್ಷಣ, ಸಾಹಿತ್ಯ, ಜ್ಞಾನ ಪಸರಿಸುವಲ್ಲಿ ಯಾವತ್ತೂ ಕಂಕಣಬದ್ದವಾಗಿರುತ್ತದೆ ಎಂದು ತಿಳಿಸುತ್ತಾ ಚಿರಂಜೀವಿ ರೋಡಕರ್ ಅವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಎಲ್ಎಸ್ ಜಿಎ ಮಮತಾ ದಾನವಾಡಕರ ಸೇರಿದಂತೆ ಎಲ್ಲಾ ಸಿಬ್ಬಂದಿ ಹಾಜರಿದ್ದರು.
- ಕರುನಾಡ ಕಂದ
