
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗಡಿ ಗ್ರಾಮದ 4.2 ಕಿಲೋಮೀಟರ್ ರಸ್ತೆಯ ಮರು ಡಾಂಬರೀಕರಣಕ್ಕೆ ರಾಜ್ಯ ಹೆದ್ದಾರಿ ನಿರ್ವಹಣೆ ಯೋಜನೆ ಅಡಿಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲು ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿ
ಗಡಿಭಾಗದ ಗೋಪಿನಾಥಂ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ, ಹಲವಾರು ವರ್ಷಗಳಿಂದ ರಸ್ತೆ ಅಭಿವೃದ್ಧಿಯಾಗದೆ ಗಡಿ ಗ್ರಾಮವು ಬಹು ಬೇಡಿಕೆಯ ಗ್ರಾಮಸ್ಥರ ಒತ್ತಾಯದ ಮೇರೆಗೆ ಒಂದು ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಉಳಿದಿರುವ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಗಡಿ ಗ್ರಾಮದ ವಿವಿಧ ಗ್ರಾಮಗಳಿಗೂ ವಿಸ್ತರಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಎಂ. ಆರ್ .ಮಂಜುನಾಥ್ ತಿಳಿಸಿದರು.
ನಂತರ ಗೋಪಿನಾಥಮ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಕೆರೆ, ಕೋಟಿ, ಕಾಲುವೆ, ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಇದಲ್ಲದೆ ಗೋಪಿನಾಥಮ್ ಗ್ರಾಮದಲ್ಲಿ ನೂತನ ಆಸ್ಪತ್ರೆ ಸ್ಥಾಪನೆ ಸರ್ವೇ ನಂ 51/1 ರಲ್ಲಿ ಒಟ್ಟು 5.50 ಎಕರೆ ಇದ್ದು ಇದರಲ್ಲಿ ಸುಮಾರು 2ಎಕರೆ ಜಾಗದಲ್ಲಿ ಅಸ್ಪತ್ರೆ ಸ್ಥಾಪನೆ ಮಾಡಲು ಸ್ಥಳ ನಿಗದಿ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಎಇಇ ಅಭಿಲಾಷ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನಾಗರಾಜ್ ರೆಡ್ಡಿ, ಸದಸ್ಯರಾದ ಸೋಮುನಾಯಕ, ಮಾಜಿ ಗ್ರಾಂ.ಪ ಅಧ್ಯಕ್ಷರಾದ ಗೋವಿಂದರಾಜು, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಜ, ಗ್ರಾಂ.ಪಂ. ಅಭಿವೃದ್ಧಿ ಅಧಿಕಾರಿ ರಾಜ್ ಕುಮಾರ್, ಮುಖಂಡರುಗಳಾದ ಜಯರಾಮ್ ರೆಡ್ಡಿ, ಪೆರುಮಾಳ್, ಡಿಕೆ ರಾಜು, ಡಿ ಆರ್ ಮಾದೇಶ್, ಜಯರಾಮು, ವೆಂಕಟೇಶ್, ಸುರೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
- ಕರುನಾಡ ಕಂದ
