
ಮಹಿಳೆಯರಲ್ಲಿ ಸಹನೆ, ಕ್ರಿಯಾಶೀಲತೆ ಮತ್ತು ಸ್ಪಂದನೆ ಹೆಚ್ಚು ಎಂದು ಕೊಪ್ಪಳ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕಿ ಡಾ. ಪಾರ್ವತಿ ಕನಕಗಿರಿ ಅವರು ಹೇಳಿದರು.
ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಶನಿವಾರದಂದು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ. ಎನ್, ಎಸ್, ಎಸ್, ವಾರ್ಷಿಕ ಶಿಬಿರದಲ್ಲಿ,ಮಹಿಳೆಯರ ಆರ್ಥಿಕ ಸಬಲೀಕರಣ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಹೆಣ್ಣೆಂದರೆ ಬರಿ ದೇಹವಲ್ಲ, ಅದು ಮನಸ್ಸು. ಹೆಣ್ಣುಮಕ್ಕಳು ಪುರುಷರ ಮೇಲೆ ಅವಲಂಬನೆಯಲ್ಲಿ ಇರಬಾರದು. ಹೆಣ್ಣು ಮತ್ತು ಗಂಡು ದೈಹಿಕ ರಚನೆಯಲ್ಲಿ ವ್ಯತ್ಯಾಸ ಇದೆ. ಆದರೆ ಮಾನಸಿಕ ಮತ್ತು ಜ್ಞಾನದಲ್ಲಿ ಒಂದೇ ತರಹ ಇದೆ. ನಗುವೆಂದರೆ ಗಂಡಸಿನ ಸೊತ್ತು ಎನ್ನುವ ಭಾವನೆಯಿದೆ. ಮಹಿಳೆಯರಲ್ಲಿ ಸಹನೆ, ತಾಳ್ಮೆ ಮತ್ತು ಸ್ಪಂದನೆ ಜಾಸ್ತಿ ಇರುತ್ತದೆ. ಹೆಣ್ಣುಮಕ್ಕಳು ಬಹಳ ಸೃಜನಶೀಲವಾಗಿ ಆಲೋಚನೆ ಮಾಡುತ್ತಾರೆ. ಅಪೌಷ್ಟಿಕತೆ ಹೆಚ್ಚು ಇದೆ. ನಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಂಡು ಆರ್ಥಿಕವಾಗಿ ಸಬಲೀಕರಣ ಆಗಬೇಕು. ಹೆಣ್ಣುಮಕ್ಕಳು ಬಹಳ ಜಾಸ್ತಿ ಶ್ರಮ ಪಡುತ್ತಾರೆ. ವೇತನದಲ್ಲಿ ಅಸಮಾನತೆ ಇದೆ. ಸಂವಿಧಾನವು ಹೆಣ್ಣುಮಕ್ಕಳಿಗೆ ಹಕ್ಕುಗಳನ್ನು ಕೊಟ್ಟಿದ್ದಾರೆ. ಪುರಾಣ ಕತೆಗಳು ಹೆಣ್ಣುಮಕ್ಕಳುನ್ನು ಭೋಗದ ವಸ್ತುವನ್ನಾಗಿ ಮಾಡಿದ್ದಾರೆ. ಹೆಣ್ಣುಮಕ್ಕಳ ಪ್ರತಿಭೆ ಮತ್ತು ಸೃಜನಶೀಲತೆಗೆ ಗೌರವ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ, ಕನ್ನಡ ಉಪನ್ಯಾಸಕರಾದ ಡಾ. ಮಂಜಪ್ಪ ಅವರು ಮಾತನಾಡುತ್ತಾ ಇವತ್ತು ಹೆಣ್ಣುಮಕ್ಕಳ ನಾಯಕತ್ವದಲ್ಲಿ ಯುದ್ಧ ಮಾಡಲಾಗುತ್ತದೆ, ಹೆಣ್ಣುಮಕ್ಕಳನ್ನು ಭೋಗದ ವಸ್ತುವಿನಂತೆ ನೋಡಬಾರದು. ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕು. ಇಂದಿನ ಯುವಕರಲ್ಲಿ ಜಾತಿ, ಧರ್ಮದ ಅಮಲನ್ನು ತಲೆಯಲ್ಲಿ ತುಂಬಲಾಗುತ್ತದೆ. ಹೆಣ್ಣುಮಕ್ಕಳನ್ನು ಈಗಲೂ ಕೂಡ ಶೋಷಣೆ ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ, ಹಿರಿಯ ಉಪನ್ಯಾಸಕರಾದ
ಶಿವಪ್ರಸಾದ್ ಹಾದಿಮನಿ ಅವರು ಮಾತನಾಡುತ್ತಾ ಮಹಿಳೆಯವರು ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಸಬಲೀಕರಣ ಆಗಬೇಕು. ಮಹಿಳೆಯರು ಅಡುಗೆ ಮನೆಗೆ ಸೀಮಿತ ಆಗಬಾರದು. ಇಂದು ಪುರುಷರಗಿಂತ ಹೆಣ್ಣುಮಕ್ಕಳು ಕಡಿಮೆ ಇಲ್ಲ.ಮಹಿಳೆಯರು ವೈಚಾರಿಕತೆಯನ್ನು ಬೆಳಸಿಕೊಳ್ಳಬೇಕು,ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಎನ್ ಎಸ್ ಎಸ್, ಘಟಕದ ಸಂಚಾಲಕರೂ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರೂ, ಸಹಿ ಪ್ರಾಧ್ಯಾಪಕರೂ ಆದ ಡಾ.ನರಸಿಂಹ ಅವರು ಮಹಿಳೆಯರು ವಿದ್ಯಾಭ್ಯಾಸ ವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಲ್ಲಾ ಮಹಿಳೆಯರೂ ಉನ್ನತ ಶಿಕ್ಷಣ ಪಡೆಯಬೇಕು ,ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ, ಪವಿತ್ರ, ನಿರೂಪಿಸಿದರು, ಗೀತಾಂಜಲಿ ಸ್ವಾಗತಿಸಿದರು, ಪವಿತ್ರ,ಬಿ.ವಂದಿಸಿದರು.
- ಕರುನಾಡ ಕಂದ
