ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

” ಉಗ್ರರ ತವರು ಪಾಪಿ ,ಪಾಕಿಸ್ತಾನ ಸರ್ವನಾಶವಾಗಲಿ ” : ಶ್ರೀವಿಠ್ಠಲಾಚಾರ್ಯ ದೇಶಪಾಂಡೆ

ವಿಜಯಪುರ: ದೇಶ ವಿಭಜನೆಯಾದಾಗಿನಿಂದಲೂ ಭಾರತದ ಸ್ವಾಭಿಮಾನವನ್ನು ಒಂದಿಲ್ಲ ಒಂದು ರೀತಿ ಕೆಣಕುತ್ತಿರುವ ಉಗ್ರರ ತವರೂರಾದ ಪಾಪಿ ಪಾಕಿಸ್ತಾನ ಸರ್ವನಾಶವಾಗಲಿ ಎಂದು ಶ್ರೀ ವಿಠ್ಠಲಾಚಾರ್ಯ ದೇಶಪಾಂಡೆ ಶಪಿಸಿದರು.
ಶಿಖಾರಖಾನೆಯ ಬಿ. ಕೆ. ಗುಡದಿನ್ನಿ ರಸ್ತೆಯಲ್ಲಿರುವ ಶ್ರೀ ಹನುಮಾನ ಮಂದಿರದಲ್ಲಿ ಭಾರತದ ರಕ್ಷಣೆ.ಸೈನಿಕರ ಮನೋಬಲ, ಆತ್ಮಸ್ಥೈರ್ಯ ಹೆಚ್ಚಿಸಿ, ಪಾಕಿಸ್ತಾನದ ಶತ್ರು ಸೈನ್ಯವನ್ನು ನಾಶಪಡಿಸಲು ಸರ್ವ ಶಕ್ತ ಹನುಮಂತ ಶಕ್ತಿ ನೀಡಲಿ ಎಂದು ಶನಿವಾರ 10-05-2025 ರಂದು ಬೆಳಿಗ್ಗೆ ಭಜರಂಗಬಲಿಗೆ ವಿಶೇಷ ಪೂಜೆ, ಪ್ರಾರ್ಥನೆ, ಅಭಿಷೇಕ, ಮಂಗಲಾರ್ಚನೆ ಸಲ್ಲಿಸಿ ಮಾತನಾಡಿದ ಅವರು. ಭಾರತ ದೇಶ ಶಾಂತಿ ಸದ್ಭಾವನೆ ಹೊಂದಿದ ರಾಷ್ಟ್ರ ನಾವೂ ಯಾರಿಗೂ ಕೆಡಕು ಬಯಸಿದವರಲ್ಲ. ಸರ್ವೇ ಜನಃ ಸುಖಿನೋಭವಂತೂ ಎಂದು ವಿಶ್ವ ಶಾಂತಿಯನ್ನು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುವ ಶಾಂತಿ ಪ್ರಿಯರಾದ ಭಾರತೀಯರನ್ನು ಬಲಹೀನರು ಎಂದು ತಿಳಿದು ಇತರರು ನಮ್ಮನ್ನು ದುರುಪಯೋಗಪಡಿಸಿ ಕೊಳ್ಳಲು ಬಂದರೆ ತಕ್ಕ ಉತ್ತರ ನೀಡಲು ಸದಾ ಸನ್ನದ್ದರು. ಇದನ್ನು ವೈರಿ ರಾಷ್ಟ್ರಗಳು ಇತಿಹಾಸವನ್ನು ಅರಿತು ಪಾಠ ಕಲಿಯಬೇಕು.ಇಲ್ಲದೇ ಹೋದರೆ ಭಾರತದೊಂದಿಗೆ ವೈರತ್ವ ಹೊಂದಿ ಯುದ್ಧ ಮಾಡಿ ಸರ್ವನಾಶವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ನ್ಯಾಯವಾದಿ ದಾನೇಶ ಅವಟಿ ಈ ಸಂದರ್ಭದಲ್ಲಿ ಮಾತನಾಡಿ ದೇಶದಲ್ಲಿ ಇಂದು ಯುದ್ಧದ ಕಾರ್ಮೋಡ ಕವಿದಿದೆ ಭಾರತ ಪಾಕಿಸ್ತಾನ ಪರಸ್ಪರ ನೇರ ಯುದ್ದಕ್ಕಿಳಿಯುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ, ವ್ಯಾಪಾರಿ ಬುದ್ಧಿಯ ಅಣ್ವಸ್ತ್ರಗಳನ್ನು ತುಂಬಿಟ್ಟುಕೊಂಡ ಚೀನಾ, ಜಪಾನ್, ಅಮೇರಿಕಾ, ಕೊರಿಯಾದಂತಹ ರಾಷ್ಟ್ರಗಳು ಯುದ್ಧವನ್ನು ಪರೋಕ್ಷವಾಗಿ ಬೆಂಬಲಿಸುತ್ತಿವೆ. ಯುದ್ಧವೊಂದೇ ಪರಿಹಾರವಲ್ಲ ಶಾಂತಿ ಸಹನೆ ಭಾರತೀಯರ ಬಲಹೀನತೆಯಲ್ಲ. ಕಾರಣ ವೈರಿ ರಾಷ್ಟ್ರಗಳಾದ ಚೀನಾ, ಬಾಂಗ್ಲಾ, ಪಾಕಿಸ್ತಾನಗಳು ಪದೇ ಪದೇ ಭಾರತದ ಮೇಲೆ ಕಾಲು ಕೆದರಿ ಕದನಕ್ಕೆ ಬರುತ್ತಿವೆ, ಈಗ ಯುದ್ಧ ಅನಿವಾರ್ಯವಾಗಿದೆ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೂರ್ವ ಸಿದ್ಧತೆಯಿಂದ ಜಾಗರೂಕತೆಯಿಂದ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಕ್ರಮ ಪಾಕಿಸ್ತಾನಿ ಬಾಂಗ್ಲಾ, ರೊಹಿಂಗ್ಯಾ ವಲಸಿಗರನ್ನು ಮೊದಲು ಹೊರದಬ್ಬಬೇಕು ಇವರಿಂದ ದೇಶಕ್ಕೆ ಗಂಡಾ ತರವಿದೆ ಎಂದು ತಿಳಿಸಿ. ಭಾರತೀಯರು ಜಾತಿ ಧರ್ಮ ಮತ ಪಾರ್ಟಿ ಪಕ್ಷ ಎಂದು ಕಚ್ಚಾಡದೆ ದೇಶದ ಗೆಲುವಿಗೆ ಅವಕಾಶ ಸಿಕ್ಕರೆ ಗಡಿಯಲ್ಲಿ ಭಾರತದ ಸೈನಿಕರ ಕೈ ಬಲಪಡಿಸಲು ಸೇವೆಗೆ ಸಿದ್ದರಾಗಿರಬೇಕೆಂದು ವಿನಂತಿಸಿದರು.
ಹಿರಿಯ ಧುರೀಣ ನಿಂಗಪ್ಪ ಸಂಗಾಪುರ ಮಾತನಾಡಿ ಕಾಶ್ಮೀರದ ಪೆಹಲ್ಗಾಮ ದಾಳಿಯಲ್ಲಿ ಪ್ರವಾಸಿಗರು ಈಗ ನಡೆಯುತ್ತಿರುವ ಪಾಕಿಸ್ತಾನಿ ಉಗ್ರರ ಮಟ್ಟ ಹಾಕುವ ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ಮೃತರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗದವರಿಗೆ ದುಖಃ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು. ಭಾರತದ ದಿಟ್ಟ ಮಹಿಳೆಯರಾದ ಕರ್ನಲ್ ಸೋಫೀಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ದಿಟ್ಟ ತನದಿಂದ ನಾರಿಶಕ್ತಿ ಪ್ರದರ್ಶಿಸಿ ವೈರಿಗಳನ್ನು ಮಟ್ಟಹಾಕಿ ಹೆಮ್ಮೆಯ ಭಾರತಮಾತೆಯ ಪುತ್ರಿಯರೆನಿಸಿದ್ದಾರೆ. ಅವಕಾಶ ಸಿಕ್ಕರೆ ಯುದ್ಧ ರಂಗದಲ್ಲೂ ಭಾರತೀಯ ನಾರಿಯರು ತಕ್ಕ ಉತ್ತರ ನೀಡಲು ಸಿದ್ಧ ಎಂದು ಇತಿಹಾಸ ಮಾಡುವ ಮೂಲಕ ಸಾಬೀತುಪಡಿಸಿದ್ದಾರೆ. ಅದರಲ್ಲೂ ಕರ್ನಲ್ ಸೂಫಿಯಾ ಖುರೇಷಿ ಕನ್ನಡ ನಾಡಿನವಳು ಎಂಬುದು ಕನ್ನಡಿಗರಿಗೆ ಹೆಮ್ಮೆಯ ಗರಿ ಮೂಡಿಸಿದೆ. ಅವರಿಗೆ ಹಾಗೂ ಭಾರತದ ಸಮಸ್ತ ವೀರ ಯೋಧರಿಗೆ ಎಲ್ಲ ಭಾರತೀಯರ ಪರವಾಗಿ ಅಭಿನಂದನೆಗಳು ಎಂದು ಶುಭ ಹಾರೈಸಿದರು. ಕಾರ್ಯಕ್ರಮವನ್ನು ವಿಜಯಕುಮಾರ್ ಜಾಬಾ ಶ್ರೀಮತಿ ಗೀತಾ ಜಾಬಾ ಆಯೋಜಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಅಂಗಡಿ, ಶ್ರೀದೇವಿ ಬಡಿಗೇರ ದೇಶ ಭಕ್ತಿ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ಶಿವರಾಜ್ ಶಿಂಧೆ, ಅಂಬರೀಷ್ ಇಂಡಿ, ಹುಸೇನ್ ಭಾಷಾ ತಾಸೇವಾಲೆ, ರಾಜು ಕಂಚಿಕೋಟಿ, ಬಸವರಾಜ್ ಅಡಕಿ, ಲಾಲಬಿ ತಸೇವಾಲಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಮಡೂ ಪಾಟೀಲ್ ನಿರೂಪಿಸಿದರು. ವಿಜಯ ಲಕ್ಷ್ಮೀ ಸಾಗರ ವಂದಿಸಿದರು. ಭಾರತ ದೇಶದ ಜಯ ಘೋಷಣೆಗಳೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ