

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಹಿರೇಮಠದಲ್ಲಿ ರಾಜಶೇಖರ್ ಟೆಂಗಿನ್ ಮಠದ ಮನೆತನದವರ ಶತಮಾನದ ಸಂಕಲ್ಪದಂತೆ ಹಾಗೂ 1001 ಜಂಗಮರ ದಾಸೋಹ ಮತ್ತು ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮವು ಅದ್ದೂರಿಯಾಗಿ ಜರುಗುತ್ತಾ ಬರುತ್ತಿದೆ.
ದಿ. 9.05.2025 ರಂದು ಶುಕ್ರವಾರ ನಡೆದಂತಹ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಮಪೂಜ್ಯ ಶರಣಬಸಪ್ಪ ಅಪ್ಪನವರ ಧರ್ಮಪತ್ನಿಯಾದ ಡಾ. ದಾಕ್ಷಾಯಿಣಿ ಅಮ್ಮನವರು ಅಮೃತವಾಣಿಯಲ್ಲಿ ಹೆಣ್ಣು ಮಗಳು ತನ್ನ ತವರು ಮನೆಗೆ ಬರುವಾಗ ಯಾವ ರೀತಿ ಸತ್ಕಾರ ಕೋರುತ್ತಾರೋ ಅದಕ್ಕಿಂತ ಹೆಚ್ಚಾಗಿ ರಟಕಲ್ ಗ್ರಾಮದ ತಾಯಿಂದರು ನನಗೆ ಅದ್ದರಿಯಾಗಿ ಬರಮಾಡಿಕೊಂಡರು, ರಕ್ತದಾನ, ನೇತ್ರದಾನ ದಾನಗಳಲ್ಲಿ ಶ್ರೇಷ್ಠವಾಗಿರುತ್ತದೆ, ಅದೇ ರೀತಿಯಾಗಿ ಶರಣರ ವಿಚಾರದಲ್ಲಿ ಅನ್ನದಾನವು ಶ್ರೇಷ್ಠವಾಗಿದೆ. ನಾವುಗಳು ಸಮಾಜ ಸೇವೆಗಳಲ್ಲಿ ತೊಡಗಿ ದಾನವೇ ನಮ್ಮ ಕಾಯಕವೆಂದು ತಿಳಿದು, ಅನ್ನದಾನದ ಬಗ್ಗೆ ಮಾರ್ಮಿಕವಾಗಿ ವಿಚಾರವನ್ನು ತಿಳಿಸಿದಂತಹ ಮಾತೋಶ್ರೀ ಶ್ರೀ ಡಾ. ದ್ರಾಕ್ಷಾಯಿಣಿ ಎಸ್. ಅಪ್ಪಾ ಚೇರ್ ಪರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಸದಸ್ಯರು ಬೋರ್ಡ್ ಆಫ್ ಗವರ್ನರ್ ಕಲಬುರಗಿ ಅಮ್ಮನವರು ಈ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಚನ್ನಮಲ್ಲಪ್ಪ ಬೆನಕನಳ್ಳಿ ರಟಕಲ್ ವಿಶ್ರಾಂತಿ ನ್ಯಾಯಮೂರ್ತಿಗಳು ಬೆಂಗಳೂರು ರವರು ಈ ಕಾರ್ಯಕ್ರಮದ ಸ್ಥಾನವನ್ನು ವಹಿಸಿ ಮಾತನಾಡುತ್ತಾ ಪ್ರತಿಯೊಬ್ಬರು ಕಾನೂನು ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಮಠದ ಕಾರ್ಯಕ್ರಮಗಳಲ್ಲಿ ಅನ್ನದಾನವನ್ನು ತನು ಮನ ಧನದಿಂದ ಸೇವೆಯನ್ನು ಎಲ್ಲರೂ ಮಾಡಬೇಕು ಮತ್ತು ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಿ ರಟಕಲ್ ಗ್ರಾಮದ ಯುವಕರ ಯುವತಿಯರು ಉನ್ನತ ಹುದ್ದೆಯನ್ನು ಪಡೆಯಬೇಕೆಂದು ಈ ಸಂದರ್ಭದಲ್ಲಿ ತಮ್ಮ ಮನದಾಳ ಮಾತನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ 2024 -25 ನೇ ಸಾಲಿನ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದೇ ರೀತಿ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಭಾರತೀಯರ ಸಾವಿನ ಪ್ರತಿಯಾಗಿ ಉಗ್ರವಾದಕ್ಕೆ ಉತ್ತೇಜನ ನೀಡುತ್ತಿರುವ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನುಗ್ಗಿ ಯಶಸ್ವಿ ಕಾರ್ಯಾಚರಣೆ ಮಾಡಿದ ನಮ್ಮ ಭಾರತೀಯ ಸೈನ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿ ನಮ್ಮ ಸೈನಿಕರ ಸುರಕ್ಷತೆಗೆ ಹಾಗೂ ಅವರ ಒಳಿತಿಗಾಗಿ ಮತ್ತು ಪಾಹಲ್ಗಂ ಹುತಾತ್ಮರಾದ ಭಾರತೀಯರಿಗೆ ಮೌನ ಆಚರಣೆ ಮಾಡಲಾಯಿತು.
ಈ ಪುರಾಣ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಷ. ಬ್ರ. ಶ್ರೀ ರೇವಣಸಿದ್ಧ ಶಿವಾಚಾರ್ಯ ಹಿರೇಮಠ ರಟಕಲ್ ಪೂಜ್ಯರು ಸಾನಿಧ್ಯ ವಹಿಸಿದರು, ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ, ಮಾತೋಶ್ರೀ ಶ್ರೀ ಡಾ. ದ್ರಾಕ್ಷಾಯಿಣಿ ಎಸ್. ಅಪ್ಪಾ ಚೇರ್ ಪರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಸದಸ್ಯರು ಬೋರ್ಡ್ ಆಫ್ ಗವರ್ನರ್ ಕಲಬುರಗಿ ಅಮ್ಮನವರು, ಶ್ರೀ ಚನ್ನಮಲ್ಲಪ್ಪ ಬೆನಕನಳ್ಳಿ ರಟಕಲ್ ವಿಶ್ರಾಂತಿ ನ್ಯಾಯಮೂರ್ತಿಗಳು ಬೆಂಗಳೂರು, ಬಸವರಾಜ ಚೌಕ, ಸಿದ್ದಯ್ಯ ಸ್ವಾಮಿ ಕ್ಕಿಣಿ, ಶಿವರಾಜಪ್ಪ ಭೀಮಳ್ಳಿ,ರಾಜಶೇಖರ ಟೆಂಗಿಮಠ್,ಶರಣಬಸಪ್ಪ ಮಾಮಶೆಟ್ಟಿ, ಪುರಾಣಿಕರಾದ ಶಂಭುಲಿಂಗಯ್ಯ ಶಾಸ್ತ್ರಿ, ಇನ್ನು ಅನೇಕ ಗ್ರಾಮಸ್ಥರು ಮತ್ತು ಮಹಿಳೆಯರು, ಮಲ್ಲು ಮರಗುತ್ತಿ, ವೀರಣ್ಣ ಗಂಗಾಣಿ ರೈತ ಸೇನೆ ತಾಲೂಕಾಧ್ಯಕ್ಷರು ಹಾಗೂ ಇತರರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್
