
ದಾವಣಗೆರೆ : ಜಿಲ್ಲೆಯ ಹೊನ್ನಾಳಿ ನಗರದ ಸಭಾಭವನದಲ್ಲಿ ಕಾನಿಪ ಧ್ವನಿ ಹೊನ್ನಾಳಿ ತಾಲೂಕಿನ ಅಧ್ಯಕ್ಷರು ಹಾಗೂ ಸಂಜೆವಾಣಿ ದಿನ ಪತ್ರಿಕೆಯ ವರದಿಗಾರರಾದ ಸುರೇಶ್ ನ್ಯಾಮತಿ ತಾಲೂಕಿನ ಅಧ್ಯಕ್ಷರು ಹಾಗೂ ಪ್ರಜಾವಾಣಿ ದಿನ ಪತ್ರಿಕೆಯ ವರದಿಗಾರರಾದ ಡಿ.ಎಂ.ಹಾಲಾರಾಧ್ಯ, ಆಜ್ ಕಾ ಇನ್ ಕ್ವಿಲಾಬ್ ಪತ್ರಿಕೆಯ ಹೊನ್ನಾಳಿ ವರದಿಗಾರರಾದ ಶಕೀಲ್ ಅಹಮದ್, ವಿಜಯ ನಗರ ಸಾಮ್ರಾಜ್ಯ ದಿನಪತ್ರಿಕೆಯ ಹೊನ್ನಾಳಿ ವರದಿಗಾರರಾದ ಡಿ.ಎಂ.ಪ್ರಭಾಕರ್, ದಾವಣಗೆರೆ ಪಬ್ಲಿಕ್ ವಾಯ್ಸ್ ಪತ್ರಿಕೆಯ ಹೊನ್ನಾಳಿ ವರದಿಗಾರರಾದ ಕೃಷ್ಣಮೂರ್ತಿ, ಧೃವ ಟಿ.ವಿ.ನ್ಯೂಸ್ ಚಾನಲ್ ನ ಹೊನ್ನಾಳಿ ವರದಿಗಾರರಾದ ಭರತ್, ಹೊನ್ನಾಳಿ ತಾಲೂಕು ವಿತರಕರಾದ ರಾಜು ಎಂ.ಆರ್, ನ್ಯಾಮತಿ ವಿಜಯ ನಗರ ಸಾಮ್ರಾಜ್ಯ ವರದಿಗಾರರಾದ ಯುವರಾಜ್, ಸುರೇಶ್ ನಾಯಕ್ ಹಾಗೂ ಲಿಂಗಾಪುರ ವಿಜಯನಗರ ಸಾಮ್ರಾಜ್ಯ ದಿನಪತ್ರಿಕೆಯ ವರದಿಗಾರ್ತಿಯಾದ ರೇಖಾ ರವರು ಭಾಗವಹಿಸಿದಂತ ಈ ಸಭೆಯ ಅಧ್ಯಕ್ಷತೆಯನ್ನು ಬಂಗ್ಲೆ ಮಲ್ಲಿಕಾರ್ಜುನ ರವರು ವಹಿಸಿ ಸೌಹಾರ್ದಯುತ ಮಾತುಕತೆ ನಡೆಸಿ ಅನೇಕ ಜಲ್ವಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಕೊನೆಯಲ್ಲಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರಿಗೆ ಹೃದಯ ಪೂರ್ವಕ ಸನ್ಮಾನದ ಜೊತೆಗೆ ಇದೇ ತಿಂಗಳು 24 ರಂದು ನಡೆಯುವ ಪತ್ರಕರ್ತರ ರಾಜ್ಯ ಸಮ್ಮೆಳನದ ಆಹ್ವಾನ ಪತ್ರಿಕೆಯನ್ನು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಪ್ರತಿಯೊಬ್ಬ ಪತ್ರಕರ್ತರಿಗೆ ನೀಡುವುದರೊಂದಿಗೆ ಸಮ್ಮೇಳನದ ಯಶಸ್ವಿಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ವರದಿ ಕೊಡಕ್ಕಲ್ ಶಿವಪ್ರಸಾದ್
