ಕಂಪ್ಲಿ:ಮೇ.12. ಕ್ಷೇತ್ರದಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿಯಾಗಿದ್ದು, ಡಾಂಬರ್ ರಸ್ತೆಯಲ್ಲಿ ಟ್ರ‍್ಯಾಕ್ಟರ್ ಕಬ್ಬಣದ ವೀಲ್ ಹಾಕುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ಇದರಿಂದ ಕೋಟ್ಯಾಂತರ ಅನುದಾನ ವ್ಯರ್ಥವಾಗುವಂತಾಗಿದೆ. ಆದ್ದರಿಂದ ರೈತರು ಗಮನಹರಿಸಿ, ರಸ್ತೆ ಮೇಲೆ ವೀಲ್ ಹಾಕುವುದು ಬಿಡಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಸುಮಾರು 490 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ದೇವಸಮುದ್ರ-ಚಿಕ್ಕಜಾಯಿಗನೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಒಂದು ಅನುದಾನ ತರಲು, ಒಂದೆರಡು ವರ್ಷ ಬೇಕು. ಅಭಿವೃದ್ಧಿಗಾಗಿ ಕಷ್ಟಪಟ್ಟು ಅನುದಾನ ತಂದು, ರಸ್ತೆಗಳನ್ನು ಮಾಡಲಾಗುತ್ತಿದೆ. ಇಂತದರಲ್ಲಿ ರೈತರು ವೀಲ್ ಹಾಕುವುದರಿಂದ ರಸ್ತೆಗಳು ಹಾಳಾಗುತ್ತವೆ. ಹೊಸ ರಸ್ತೆಗಳು ವೀಲ್ ಹಾಕುವುದರಿಂದ ಬಾಳಿಕೆ ಬರುವುದಿಲ್ಲ. ಆದ್ದರಿಂದ ರೈತರು ಜಾಗೃತರಾಗಿ ವೀಲ್ ಹಾಕುವುದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಒಂದೆರಡು ವರ್ಷದಲ್ಲಿ ಜವುಕು, ಕಿರು ಸೇತುವೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಕೋಳೂರು ಕ್ರಾಸ್-ಕುರುಗೋಡು, ಕುರುಗೋಡು-ಎಮ್ಮಿಗನೂರು, ಎಮ್ಮಿಗನೂರು-ಕಂಪ್ಲಿ,
ಬಳ್ಳಾರಿ / ಕಂಪ್ಲಿ : ರಾಮಸಾಗರದವರೆಗೆ ಸುಮಾರು 37 ಕಿ.ಮೀವರೆಗೆ ಸೇರಿದಂತೆ ಒಟ್ಟಾರೆಯಾಗಿ 67 ಕಿ.ಮೀ ರಸ್ತೆ ಅಭಿವೃದ್ಧಿಯಾದಂಗಾಗಿದೆ. ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿಗೆ ದಿನವಿಡಿ ಶ್ರಮಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಗ್ರಾಪಂ ಅಧ್ಯಕ್ಷೆ ಮಾಯಪ್ಪ, ಸದಸ್ಯರಾದ ನಾಯಕರ ವೆಂಕೋಬ, ಮೌನೇಶ, ಮುಖಂಡರಾದ ಕೆ.ಷಣ್ಮುಖಪ್ಪ, ಹೆಚ್.ಗುಂಡಪ್ಪ, ಕೋರಿ ಚನ್ನಬಸುವ, ಕರಿಯಪ್ಪ, ಚಾನಾಳ ಪಕ್ಕೀರಪ್ಪ, ಕೋರಿ ನಾಗೇಂದ್ರಪ್ಪ, ದೊಡ್ಡನಾಯಕ, ವಿರುಪಣ್ಣ, ಅಂಜಿನಿ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
