
ಯಾದಗಿರಿ/ ಶಹಾಪುರ :
ಕರ್ನಾಟಕ ಸರಕಾರ ಸಮಯ 8 ಗಂಟೆಯಿಂದ 1.30 ರವರೆಗೆ ಕಚೇರಿ ನಿಮಯ ನೀಡಿದ್ದಾರೆ. ಆದರೆ ಇವರು ಬರುವುದು 9 ರಿಂದ 9.30 ಕ್ಕೆ ಬರುತ್ತಾರೆ ಮತ್ತು11 ಘಂಟೆಗೆ ಟೀ ಸಮಯದಲ್ಲಿ ಒಂದು ಅರ್ಧ ಘಂಟೆ ತೆಗೆದುಕೊಳ್ಳುತ್ತಾರೆ, ಮತ್ತು ಇವರು ತಮ್ಮ ಸಮಯ ವ್ಯಯ ಮಾಡುವ ಜೊತೆ ಜೊತೆಗೆ ಜನರ ಸಮಯ ಕೂಡಾ ವ್ಯಯ ಮಾಡುತ್ತಿದ್ದಾರೆಂದು ಸಾರ್ವಜನಿಕರು ಸಿಬ್ಬಂದಿಗಳ ವಿರುದ್ಧ ಹಿಡಿ ಶಾಪವನ್ನು ಹಾಕುತ್ತಿದ್ದಾರೆ ಅದೇ ರೀತಿ ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್ ಒದಗಿಸಬೇಕು ಎಂದು ಅಂಗವಿಕಲ act ನಿಯಮ ಕೂಡಾ ಜಾರಿ ಮಾಡಿರುವುದಿಲ್ಲ ಮತ್ತು ಆಸನಗಳ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅಂಗವಿಕಲರು ಆಗ್ರಹಿಸುತ್ತಿದ್ದಾರೆ.
ಪ್ರಶ್ನಿಸಿದವರಿಗೆ ಶರಣು ಔರಾದಕರ ಮತ್ತು ಸಂಗಯ್ಯ ಸ್ವಾಮಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.ಇದಕ್ಕೆ ಕಾರಣ 3 ವರ್ಷ ಒಬ್ಬ ವ್ಯಕ್ತಿ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ ಆದ ಕಾರಣ ಅವರ 3 ವರ್ಷ ಆಗಿದ್ದರೆ ಅವರಿಗೆ ವರ್ಗಾವಣೆ ಮಾಡುವ ಮೂಲಕ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು ಕೂಡಲೇ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಎಲ್ಲಾ ಅಂಗವಿಕಲರು ನಗರಸಭೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಅದೇ ರೀತಿ ಜಿಲ್ಲೆಯ ಜಿಲ್ಲಾಧಿಕಾರಿ ಅಂಗವಿಕಲರ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಅವರ ಗಮನಕ್ಕೂ ತರುವ ಪ್ರಯತ್ನ ಮಾಡುತ್ತೇವೆ ಪೌರಾಯುಕ್ತರು ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಲು ಅಂಗವಿಕಲರ ಸಂಘದ ರಾಜ್ಯ ಅಧ್ಯಕ್ಷರು ಸುಭಾಸ ಹೋತಪೇಟ ಇವರು ಆಗ್ರಹಿಸಿದ್ದಾರೆ.
- ಕರುನಾಡ ಕಂದ
