
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯಗುರುಗಳು ಮಕ್ಕಳಿಂದ ಹಣ ವಸೂಲಿ ಮಾಡುವುದನ್ನು ನೇರಾ ನೇರವಾಗಿ ಭರದಿಂದ ನಡೆಸುತ್ತಿದ್ದಾರೆ.
ಇತ್ತೀಚೆಗೆ 2024 -2025 ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದೆ ಎಂದು ಪರೀಕ್ಷೆಗೆ ಕೂಡಿಸದ ಕಾರಣ, ಆ ಮಕ್ಕಳು ಮತ್ತೆ ಸರಕಾರದ ನಿಯಮದಂತೆ ಮಕ್ಕಳು ಮತ್ತೆ ಪರೀಕ್ಷೆ ಬರೆಯಲು ಬಂದಾಗ ಮಕ್ಕಳಿಂದ ಫೀಸ್ ಎಂದು ಕೇಳುವ ಮೂಲಕ ಸಾವಿರಾರು ರೂಪಾಯಿ ಹಣ ವಸೂಲಿ ಮಾಡಿರುತ್ತಾರೆ.
ಇದಕ್ಕೆ ಫೋನ್ ಪೇ ಮತ್ತು ಕೈಯಿಂದ ತೆಗೆದುಕೊಂಡು ಹಣವೇ ಸಾಕ್ಷಿ ಮತ್ತು ಮಕ್ಕಳು ಪೋಷಕರೇ ಸಾಕ್ಷಿ ಹಾಗೂ ಇನ್ನುಳಿದ ಮಕ್ಕಳು ಪ್ರತಿದಿನ ಶಾಲೆಗೆ ಫೀಸ್ ಕಟ್ಟಲು ಬಂದಿರುತ್ತಾರೆ, ಆದರೆ ಮುಖ್ಯಗುರುಗಳು ಶಾಲೆಗೆ ಬಂದಿರುವುದಿಲ್ಲ ಫೋನಿನ ಮುಖಾಂತರ ಮಾತನಾಡಿದರೆ ಕಲಬುರಗಿಗೆ ಬಂದು ಫೀಸು ಕಟ್ಟಿ ಎಂದು ಹೇಳಿರುತ್ತಾರೆ ಇದು ಸರಕಾರಿ ಶಾಲೆಯೋ ಅಥವಾ ಅವರ ಖಾಸಗಿ ಶಾಲೆಯೋ ಎಂದು ಅರ್ಥವಾಗುತ್ತಿಲ್ಲ ಮತ್ತು ಸಹ ಶಿಕ್ಷಕರು ಸಹ ಬಂದಿರುವುದಿಲ್ಲ ಇನ್ನೂ ಬಹಳ ವಿದ್ಯಾರ್ಥಿಗಳು ಪರೀಕ್ಷೆಗೆ ಕೂಡುವವರಿದ್ದಾರೆ ಮನಸ್ಸಿಗೆ ಬಂದಂತೆ ಮಾತನಾಡುವ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಿ ಇವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಅಪರ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲ್ಬುರ್ಗಿ ಮತ್ತು ಉಪ ನಿರ್ದೇಶಕರು ಆಡಳಿತ ಕಲಬುರ್ಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿಂಚೋಳಿ ರವರಿಗೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಹಾಗೂ ಈಗಾಗಲೇ ಪರೀಕ್ಷೆಗೆ ಕೂಡದೆ ವಂಚಿತರಾದ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ಮಾಡಿ ಮತ್ತೆ ಪರೀಕ್ಷೆಗೆ ಅನುವು ಮಾಡಿಕೊಡಬೇಕು ಎಷ್ಟೋ ಬಾರಿ ಫೋನಿನ ಮುಖಾಂತರ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾರೂ ಸಹ ಆ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಂಡಿಲ್ಲ ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮುಖ್ಯ ಗುರುಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ರಾಜ್ಯ ಹೆದ್ದಾರಿ ತಡೆದು ಹೋರಾಟ ಮಾಡಬೇಕಾಗುತ್ತದೆ ಕರ್ನಾಟಕ ರಾಜ್ಯ ಕಲ್ಬುರ್ಗಿ ಜಿಲ್ಲೆಯಲ್ಲಿ ಹಿಂದುಳಿದ ತಾಲೂಕ ವೆಂದರೆ ಅದುವೆ ಚಿಂಚೋಳಿ ತಾಲೂಕು ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಫೇಲಾದ ಕಾರಣ ಈ ಶಾಲೆಯಲ್ಲಿನ ಮುಖ್ಯ ಗುರುಗಳು ಹಾಗೂ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ವೀರಣ್ಣ ಗಂಗಾಣಿ ರೈತ ತಾಲೂಕಾಧ್ಯಕ್ಷರು ಎಚ್ಚರಗೊಳಿಸುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ವೀರೇಶ್ ಬಕಟಗಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗೌರಿಶಂಕರ್ ಕಿಣ್ಣಿ, ಚಿಂಚೋಳಿ ಮಂಡಲ ಓಬಿಸಿ ಮೋರ್ಚಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಮರಗುತಿ, ಮಹಾ ಶಕ್ತಿಕೇಂದ್ರ ರಟಕಲ್ ಗ್ರಾಮದ ಅಧ್ಯಕ್ಷರಾದ ಶರಣು ಸೀಗಿ ಅಪಾರ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ರವರಿಗೆ ಮನವಿ ಕೊಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್
