ಬೆಂಗಳೂರು : ಪ್ರೀತಿಯ ಶ್ರೀವೈಷ್ಣವ ಬಂಧುಗಳೇ,
ಭಾರತದ ಘನ ಸರ್ಕಾರದ ಕರ್ನಾಟಕದ ಘನ ಸರ್ಕಾರದ ವತಿಯಿಂದ ಶೀಘ್ರದಲ್ಲೇ ಜಾತಿಗಣತಿ ಜನಗಣತಿ ಪ್ರಾರಂಭವಾಗುತ್ತಿದೆ ಎಂದು ಸುದ್ದಿ ಮಾಧ್ಯಮಗಳಲ್ಲಿ ನಾವೆಲ್ಲರೂ ಗಮನಿಸುತ್ತಿದ್ದೇವೆ
” ಶ್ರೀವೈಷ್ಣವ ” ಜನಾಂಗ ಜಾತಿ ಪಟ್ಟಿಯಲ್ಲಿ ಇಲ್ಲದಿರುವುದು ನಾವೆಲ್ಲರೂ ಅರಿತಿದ್ದೇವೆ, ಜಾತಿ ಪಟ್ಟಿಯಲ್ಲಿ ಅನೇಕ ಹೆಸರಿನಲ್ಲಿ ವಿವಿಧ ಪಂಗಡಗಳು ಇರುವುದನ್ನು ನೋಡಿದ್ದೇವೆ ನಮ್ಮ ಶ್ರೀವೈಷ್ಣವರು ಇನ್ನು ಮುಂದೆ ಭಾರತ ಸರ್ಕಾರದ ಕರ್ನಾಟಕ ಸರ್ಕಾರದ ವತಿಯಿಂದ ಯಾವುದೇ ಪ್ರತಿನಿಧಿಗಳು ನಮ್ಮಲ್ಲಿ ಬಂದು ಜಾತಿ ಗಣತಿ ಜನಗಣತಿ ಮಾಡುವಾಗ ನಮ್ಮ ಜಾತಿಯ ಪ್ರಶ್ನೆ ಬಂದಾಗ “ಶ್ರೀವೈಷ್ಣವ “ಎಂದೇ ಬರೆಸಬೇಕು ಯಾವುದೇ ಉಪ ಪಂಗಡಗಳ ಹೆಸರು ಬರೆಸಬಾರದು ಮುಂದಿನ ದಿನಗಳಲ್ಲಿ ನಮ್ಮ ಶ್ರೀವೈಷ್ಣವ ಜನಾಂಗದ ಮುಂದಿನ ಪೀಳಿಗೆಗೆ ಸಾಮಾಜಿಕ ಸ್ಥಾನಮಾನ ಪಡೆದುಕೊಳ್ಳಲು ಬಹಳ ಕಷ್ಟಪಡಬೇಕಾಗುತ್ತದೆ, ಪರಮಪೂಜ್ಯ ಸ್ವಾಮೀಜಿಗಳು ವಿವಿಧ ಪಂಗಡಗಳ ಹೆಸರಿನಲ್ಲಿ ನಾವಿರುವುದು ಬೇಕಾಗಿಲ್ಲ ಭಗವದ್ ಶ್ರೀ ರಾಮಾನುಜಾಚಾರ್ಯರ ಅನುಯಾಯಿಗಳು ಸರ್ವರೂ ಒಂದೇ “ಶ್ರೀವೈಷ್ಣವರು “ಎಂದೇ ಎಲ್ಲಾ ಕಡೆ ಎಲ್ಲಾ ಸಮಯದಲ್ಲಿ ಎಲ್ಲಾ ದಾಖಲಾತಿಗಳಲ್ಲಿ ನಮೂದಿಸಿಕೊಂಡು ನಾವು “ಶ್ರೀವೈಷ್ಣವರು” ಎಂದು ಗುರುತಿಸಿ ಕೊಳ್ಳಬೇಕೆಂದು ಎಲ್ಲಾ ಕಡೆ ಅವರ ಉತ್ತರಯಾಸಗಳಲ್ಲಿ ಆಶೀರ್ವಚನಗಳಲ್ಲಿ ತಿಳಿಸಿ ಅನುಗ್ರಹ ಮಾಡುತ್ತಲೇ ಬಂದಿದ್ದಾರೆ. ನಾವುಗಳು ಸಹ ಸ್ವಯಂ ಜಾಗೃತರಾಗಿ ಇನ್ನು ಮುಂದೆ ನಮ್ಮನ್ನು ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಸಲುವಾಗಿ ನಾವು “ಶ್ರೀವೈಷ್ಣವರು ” ಎಂದೇ ಗುರುತಿಸಿಕೊಳ್ಳಬೇಕಾಗಿದೆ ಬೇರೆ ಯಾವುದೇ ರೀತಿಯ ಮೇಲರಿಮೆ ಕೀಳರಿಮೆ ನಮಗೆ ಬೇಕಾಗಿರುವುದಿಲ್ಲ,
ಕರ್ನಾಟಕ ರಾಜ್ಯದ ಶ್ರೀವೈಷ್ಣವ ಜನಾಂಗದ ಮುಖಂಡರು ಶ್ರೀವೈಷ್ಣವ ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು ತಮ್ಮ ಸಂಪರ್ಕದಲ್ಲಿರುವ ಸಮಸ್ತ ಶ್ರೀವೈಷ್ಣವರಿಗೂ ಯಾವುದೇ ಸಂದರ್ಭದಲ್ಲಿ ಜಾತಿ ವಿಚಾರ ಜನಾಂಗದ ವಿಚಾರ ಬಂದಾಗ ನಾವು ಈ ಜಗತ್ತಿನ ಪರಿಪಾಲಕ ಶ್ರೀಮನ್ನಾರಾಯಣನ ಉಪಾಸನೆ ಮಾಡುತ್ತಾ ಜಗದ್ಗುರು ಭಗವದ್ ರಾಮಾನುಜಾಚಾರ್ಯರ ಅನುಯಾಯಿಗಳು ನಾವು “ಶ್ರೀವೈಷ್ಣವರು” ಎಂದು ಎಲ್ಲಾ ದಾಖಲಾತಿಗಳಲ್ಲೂ ನಮೂದಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಬೇಕಾಗಿದೆ, ಈಗಾಗಲೇ 2024ರ ನವಂಬರ್ ತಿಂಗಳಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಂತಹ ಬೃಹತ್
“ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ “ಮಹಾ
ಶ್ರೀ ವೈಷ್ಣವ ಸಮ್ಮೇಳನದಲ್ಲಿ
ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ ವತಿಯಿಂದ ಕರ್ನಾಟಕದ ಘನ ಸರ್ಕಾರಕ್ಕೆ ಶ್ರೀವೈಷ್ಣವರನ್ನು ಜಾತಿ ಪಟ್ಟಿಯಲ್ಲಿ ಸೇರಿಸುವಂತೆ ಮನವಿ ಪತ್ರ ಸಲ್ಲಿಸಲಾಗಿದೆ ಮುಂದೆ ನಾವೆಲ್ಲರೂ “ಶ್ರೀವೈಷ್ಣವ “ಎಂದೇ ಗುರುತಿಸಿಕೊಳ್ಳಬೇಕಾಗಿದೆ ದಾಖಲಿಸಿಕೊಳ್ಳಬೇಕಾಗಿದೆ.
“ಸ್ಪಷ್ಟ ಅಭಿಪ್ರಾಯ “
- ಎನ್. ರಂಗಾಚಾರ್ ಉಪಾಧ್ಯಕ್ಷರು
ಉಭಯ ವೇದಾಂತ ಶ್ರೀ ವೈಷ್ಣವ ಸಭಾ ದಾಸನಪುರ ಶ್ರೀ ರಾಮಾನುಜಪುರಂ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಉತ್ತರ - ಕರುನಾಡ ಕಂದ
