ಬಳ್ಳಾರಿ / ಎಮ್ಮಿಗನೂರು : ಇಲ್ಲಿನ ಕೂಸಿನ ಮನೆ ಕೇಂದ್ರದಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾಡಲಾಯಿತು.
ಎಮ್ಮಿಗನೂರಿನ ಶಿಕ್ಷಕ ಪಂಪಾಪತಿ. ಹೆಚ್. ಮಾತನಾಡಿ ಆರೋಗ್ಯಕರ ಜೀವನಕ್ಕಾಗಿ ಒಬ್ಬ ವ್ಯಕ್ತಿಯು ಸಮತೋಲಿತ ಆಹಾರವನ್ನು ಹೊಂದಿರಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು, ಉತ್ತಮ ನೈರ್ಮಲ್ಯದ ಅಭ್ಯಾಸಗಳನ್ನು ಹೊಂದಿರಬೇಕು. ನಾವು ಆರೋಗ್ಯಕರವಾಗಿರಲು ಸದಾ ಸಂತೋಷವಾಗಿರಬೇಕು. ಆರೋಗ್ಯ ನಮ್ಮೆಲ್ಲರ ಸಂಪತ್ತು ಆದುದರಿಂದ ನಾವೂ ಸದಾ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಆರೋಗ್ಯ ಸರಿಯಾಗಿದ್ದರೆ ನಮ್ಮ ಬೆಳವಣಿಗೆ ಸರಿಯಾಗಿರುತ್ತದೆ ಎಂದರು.
ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ತಾರೂನಾಯಕ್ ಮಾತನಾಡಿ ಮನುಷ್ಯನಿಗೆ ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಬೇರೊಂದಿಲ್ಲ. ನಾನಾ ಬಗೆಯ ಧನ ದೌಲತ್ತುಗಳು ಇದ್ದರು ಆರೋಗ್ಯವಿಲ್ಲದಿದ್ದರೆ ಅವುಗಳನ್ನು ಅನುಭವಿಸಲು ಸಾದ್ಯವಾಗುವುದಿಲ್ಲ. ಆದ್ದರಿಂದ ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಶ್ರೇಷ್ಟವಾದದ್ದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾರದಾ ಜಡಿಮೂರ್ತಿ ಮಾತನಾಡಿ ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರೆಡು ಅವಶ್ಯಕವಾಗಿವೆ. ಅವುಗಳಲ್ಲಿ ಒಂದರ ಸ್ಥಿತಿ ಹದೆಗೆಟ್ಟರೂ ವ್ಯಕ್ತಿಯೂ ಅನಾರೋಗ್ಯಕ್ಕೆ ಒಳಗಾದಂತೆಯೇ ಪೌಷ್ಟಿಕ ಆಹಾರವನ್ನು ಸರಿಯಾಗಿ ಸೇವಿಸುವುದು. ಶ್ರಮದ ದುಡಿಮೆಗೆ ತಕ್ಕಂತೆ ವಿಶ್ರಾಂತಿ, ನಿದ್ದೆ, ಹಾಗೂ ಮನುಷ್ಯನು ಚಿಂತೆಗೆ ಒಳಗಾಗದೇ ಇದ್ದರೇ ಅದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ ಎಂದು ಹೇಳಿದರು.
ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾದ ಮಹಮ್ಮದ್ ಫಾರೂಕ್ ಅವರು ಮಾತನಾಡಿ ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹದಲ್ಲಿ ನೆಲೆಸಿರುತ್ತದೆ. ಆರೋಗ್ಯವು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ.ಆರೋಗ್ಯವಂತ ವ್ಯಕ್ತಿ ಸಮಾಜ ಮತ್ತು ರಾಷ್ಟ್ರಕ್ಕೆ ಉಪಯುಕ್ತ ಮಾನವನ ದೇಹವು ಆರೋಗ್ಯವಾಗಿರಲು ಸರಿಯಾದ ನಿದ್ರೆ.ವ್ಯಾಯಾಮ.ಪೌಷ್ಟಿಕಾಂಶದ ಆಹಾರದ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಬಸವನಗೌಡ, ಕೃಷ್ಣಮೂರ್ತಿ, ಪೂಜಾ, ಶಿಕ್ಷಣ ಪ್ರೇಮಿಗಳಾದ ಎಸ್.ರಾಮಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಜೀರ್ ಲೋಕೇಶ್, ಎಮ್ಮಿಗನೂರು ಕೂಸಿನ ಮನೆ ಕೇಂದ್ರದ ಕೇರ್ ಟೇಕರ್ಸ ಗಳಾದ ರೇಣುಕಮ್ಮ.ಹೆಚ್, ಲಕ್ಷ್ಮಿ, ಶಾಂತಾ, ಧನಲಕ್ಷ್ಮಿ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
