ಶಿವಮೊಗ್ಗ: ಇಂದು ತುಂಗಾ ಮೇಲ್ದಂಡೆ ಇಲಾಖೆಯ ಅಧಿಕಾರಿಗಳು, ಶಿವಮೊಗ್ಗ ತಾಲೂಕಿನ ಗೋವಿಂದಪುರದಲ್ಲಿನ ನಿವಾಸಿಗಳು ನಿರ್ಮಿಸಿದ್ದ ಸ್ಥಳೀಯ ದೇವಾಲಯವನ್ನು “ಅಕ್ರಮ ಒತ್ತುವರಿ” ಎನ್ನುವ ನೆಪದಲ್ಲಿ ತೆರವುಗೊಳಿಸಿದರು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಮುದಾಯದಲ್ಲಿ ಭಾರಿ ವಿರೋಧ ವ್ಯಕ್ತವಾದ ಈ ಹಿನ್ನಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಲಾಯಿತು.
ಇದಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಕುರಿತು ಗಂಭೀರವಾಗಿ ಗಮನ ಹರಿಸಿ, ತಕ್ಷಣ ಪರಿಶೀಲನೆ ನಡೆಸಿ, ದೇವಾಲಯವನ್ನು ಮರುಸ್ಥಾಪಿಸಲು ಹಾಗೂ ಭಕ್ತರ ಭಾವನೆಗಳಿಗೆ ತಕ್ಕಂತೆ ನ್ಯಾಯ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ “ಸಮುದಾಯದ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಗೌರವಿಸುವಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಯಾವುದೇ ಅಭಿವೃದ್ಧಿ ಅಥವಾ ವ್ಯವಸ್ಥಾಪನಾ ಕ್ರಮಗಳು ಜನಭಾವನೆಗಳಿಗೆ ತಾಕಿಲ್ಲದೆ ಜಾರಿಗೆ ಬರಬೇಕು” ಎಂದು ತಿಳಿ ಹೇಳಲಾಯಿತು.
ಭೇಟಿಯ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ, ತಹಸೀಲ್ದಾರ್, ತುಂಗಾ ಮೇಲ್ದಂಡೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ.
