ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾಜಿ ಸಂಸದ ದರೂರು ಪುಲ್ಲಯ್ಯ ಕಂಪ್ಲಿಯಲ್ಲಿಂದು ನಿಧನ

ಬಳ್ಳಾರಿ / ಕಂಪ್ಲಿ : ನೆರೆ ಆಂಧ್ರ ಪ್ರದೇಶದ ಅನಂತಪುರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಕಂಪ್ಲಿ ಕೊಟ್ಟಾಲ್ ನಿವಾಸಿಗಳಾಗಿದ್ದ ಮಾಜಿ ಸಂಸದ ದರೂರು ಪುಲ್ಲಯ್ಯ (95) ಸೋಮವಾರ ಮಧ್ಯಾಹ್ನ ಪಟ್ಟದ ಕರುಗೋಡು ರಸ್ತೆಯ ಎಪಿಎಂಸಿ ಆವರಣದಲ್ಲಿರುವ ತಹಸಿಲ್ದಾರ್ ಕಚೇರಿ ಅವರಣದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.
ಕಾರ್ಯ ನಿಮಿತ್ತ ಪಟ್ಟಣದ ನಾಡ ಕಚೇರಿಗೆ ಆಗಮಿಸಿದ್ದ ದರೂರು ಪುಲಯ್ಯವರು ಉಪತಹಸಿಲ್ದಾರರಿಂದ ತಮ್ಮ ಜಮೀನಿನ ಪಹಣಿ ಪತ್ರಗಳನ್ನು ಪಡೆದು ಹೊರಗೆ ಬಂದಾಗ ಯಾರೊಂದಿಗೋ ಮಾತನಾಡುತ್ತಿರುವಾಗಲೇ ತೀವ್ರವಾದ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದರೂ ಸಹಿತ ಅವರು ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.
ನಂತರ ಅವರ ಮೃತ ದೇಹವನ್ನು ಅವರ ಪುತ್ರ ಬಳ್ಳಾರಿಯಲ್ಲಿರುವ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮೃತರಿಗೆ ಕಂಪ್ಲಿ ಕೊಟ್ಟಾಲ್ ಗ್ರಾಮದಲ್ಲಿ ಸ್ವಂತ ಮನೆ ಹಾಗೂ ಜಮೀನುಗಳಿದ್ದು, ಸುಗ್ಗೇನಹಳ್ಳಿ ಸುತ್ತಮುತ್ತಲೂ ಸಹಿತ ಅವರ ಜಮೀನುಗಳಿಗೆ ಮೃತರು 1977 ಮತ್ತು 1980ರಲ್ಲಿ ಅನಂತಪುರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೇಸ್ ಪಕ್ಷದಿಂದ ಸಂಸದರಾಗಿದ್ದರು. ಇದಕ್ಕೂ ಮುನ್ನ ಅವರು ಉರವಕೊಂಡ ಪಂಚಾಯತ್ ಸಮಿತಿ ಅಧ್ಯಕ್ಷರಾಗಿದ್ದ ಅವರು ಕಂಪ್ಲಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿದ್ದರು, ಅಲ್ಲದೆ ಸಿಂಗಟಾಲೂರು ಏತ ನೀರಾವರಿ ವಿರುದ್ಧ ಹೋರಾಟ ಮಾಡಿದ್ದ ಅವರು ತುಂಗಭದ್ರಾ ಜಲಾಶಯದ ಪ್ರವಾಹ ಸಂದರ್ಭದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಸಮಾನಾಂತರ ಕಾಲುವೆ ನಿರ್ಮಾಣಕ್ಕೆ ಹೋರಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಆರು ಜನಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ