ಬಳ್ಳಾರಿ / ಕಂಪ್ಲಿ : ಆಪರೇಷನ್ ಸಿಂಧೂರ ಯಶಸ್ವಿ ಹಿನ್ನಲೆಯಲ್ಲಿ ಸೋಮವಾರ ಆಗಿ ಹುಣ್ಣಿಮೆಯಂದು ಕಂಪ್ಲಿಯ ದೇವಾಂಗ ಸಮಾಜದ ಶ್ರೀಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ, ಗದ್ದೆ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಅರ್ಚಕ ಮಿಟ್ಟಿ ಶಂಕರ್ ಪೌರೋಹಿತ್ಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ದೇವಿಗೆ ಹೊಸ ಸೀರೆ ಏರಿಸಿ ಅಲಂಕರಿಸಲಾಗಿತ್ತು. ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ, ಪ್ರಮುಖರಾದ ಮಾಗನೂರು ರಾಜೇಶವರ್ಮ, ಗದ್ಗಿ ವಿರುಪಾಕ್ಷಿ ಸೇರಿ ದೇವಾಂಗ ಸಮುದಾಯದ ಸದ್ಭಕ್ತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
