ಕೊಪ್ಪಳ :ಎನ್. ಎಸ್. ಎಸ್ ಕಾರ್ಯಕ್ರಮಗಳ ಮೂಲಕ ನಿಮ್ಮಲ್ಲಿ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಬಿ ಅವರು ಹೇಳಿದರು.
ತಾಲ್ಲೂಕಿನ ಲೇಬಗೇರೆ ಗ್ರಾಮದಲ್ಲಿ ಮಂಗಳವಾರ ದಂದು ಹಮ್ಮಿಕೊಂಡಿದ್ದ ಎನ್.ಎಸ್. ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದ ಅವರು ನೀವು ಗ್ರಾಮೀಣ ಪ್ರದೇಶದ ಸಮುದಾಯದ ಜೊತೆ ನಿಕಟ ಸಂಪರ್ಕ ಇಟ್ಟುಕೊಳ್ಳಬೇಕು, ಅಭಿವೃದ್ಧಿ ದೃಷ್ಟಿಕೋನದಲ್ಲಿ ನಾವು ಆಲೋಚನೆ ಮಾಡಲು ಸಮರ್ಥರಾಗಲು ಈ ಎನ್. ಎಸ್. ಎಸ್ ಶಿಬಿರಗಳು ಸಹಾಯವಾಗುತ್ತವೆ. ಸಾಮಾಜಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿ ದಿನ ಯೋಗ, ವ್ಯಾಯಾಮ ಮತ್ತು ವಾಕಿಂಗ್ ಮಾಡಬೇಕು. ಆಗ ನಿಮ್ಮ ಅರೋಗ್ಯ ಚೆನ್ನಾಗಿ ಇರುತ್ತದೆ. ಇದರ ಜೊತೆ ನಮ್ಮ ಮನಸ್ಸು ಕೂಡ ಬಹಳ ಶಾಂತವಾಗಿರುತ್ತದೆ.ವಿದ್ಯಾಬ್ಯಾಸ ಚನ್ನಾಗಿ ಮಾಡಿ. ಉನ್ನತ ಶಿಕ್ಷಣ ಪಡೆಯಿರಿ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಕೊಪ್ಪಳದ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ರೀ ಆನಂದ ಹಳ್ಳಿಗುಡಿ ಅವರು ಮಾತನಾಡುತ್ತಾ ನಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ನಮ್ಮ ಸಾಮರ್ಥ್ಯ ವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದಲ್ಲಿ ಕೌಶಲ್ಯಗಳನ್ನು ಅಳವಡಿಸಿದರೆ ವಿದ್ಯಾಭ್ಯಾಸ ಮುಗಿದ ನಂತರ ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಆಗುತ್ತದೆ.
ನೀವು ಹಿರಿಯರಿಂದ ಮಾರ್ಗದರ್ಶನ ಪಡೆಯಬೇಕು. ಗೊಂದಲಕ್ಕೆ ಒಳಗಾಗಬಾರದು. ಸಮಸ್ಯೆಗಳನ್ನು ನಿಬಾಸುವ ಕೌಶಲ್ಯಗಳನ್ನು ಕಲಿಯಿರಿ. ಬಳಕೆ ಯಿಂದ ನಮ್ಮಲ್ಲಿರುವ ಕೌಶಲ್ಯಗಳು ಹೆಚ್ಚಾಗುತ್ತವೆ ಎಂದು ತಿಳಿಸಿದರು.
ಕಾಲೇಜಿನ ಉಪನ್ಯಾಸಕ ಶ್ರೀ ನಿಂಗಜ್ಜ ಸೋಂಪುರ ಅವರು ಮಾತನಾಡುತ್ತ ಎನ್. ಎಸ್. ಎಸ್ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ನೀವು ಮಾಡುವ ಕೆಲಸದಿಂದ ಪ್ರೇರಣೆ ಪಡೆದುಕೊಳ್ಳಬೇಕು. ನಿಮ್ಮಲ್ಲಿ ಗೌರವ, ಅಭಿಮಾನ ಮತ್ತು ದೇಶ ಭಕ್ತಿಯನ್ನು ಬೆಳಸಿಕೊಳ್ಳಬೇಕು. ನಾವು ಸಮಾಜದ ಜನರಿಗಾಗಿ, ನಮಗಾಗಿ ಅಲ್ಲ ಅನ್ನೋದು ಎನ್. ಎಸ್.ಎಸ್ ಧ್ಯೇಯವ್ಯಾಕ್ಯ. ನಿಮ್ಮಲ್ಲಿ ದೇಶದ ಕುರಿತು ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಬೆಳಸಿಕೊಳ್ಳಬೇಕು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ನರಸಿಂಹ, ಶಿವಪ್ಪ ಬಾಡಿಗೆರೆ, ಶ್ರೀಕಾಂತ್ ಸಿಂಗಾಪುರ್, ನಿಂಗಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸೃಷ್ಟಿ ನಿರೂಪಿದರು. ದೇವಿಕಾ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶ್ರಿದೇವಿ ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ವಂದಿಸಿದರು.
- ಕರುನಾಡ ಕಂದ
