ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಸುನೀಲ ಮಂಜುನಾಥ ವರ್ಣೇಕರ ಹಾಗೂ ಬ್ರದರ್ಸ್ ವಿದ್ಯಾವತಿ ಗಣೇಶ್ ವರ್ಣೇಕರ್ ಜ್ಯೂವೆಲರ್ಸ ವತಿಯಿಂದ ಮಾವಿನ ಹಣ್ಣು ಹಾಗೂ ಬಾಳೆಹಣ್ಣಿನ ಸೀಕರಣೆ ಜೊತೆಗೆ ಚಪಾತಿಯ ಸವಿರುಚಿಯ ಒಂದು ದಿನದ ಪ್ರಸಾದ ಸೇವೆ ಅದ್ದೂರಿಯಾಗಿ ನೇರವೇರಿತು.
ಇದೇ ಸಂದರ್ಭದಲ್ಲಿ ನಯಾನಗರ ಗ್ರಾಮದ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಬೆಳವಡಿ ಗ್ರಾಮದ ಗುರುಹಿರಿಯರು ಶ್ರೀ ಸುನಿಲ್ ವರ್ಣೇಕರ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ವರದಿ ಮಂಜು .ಎಮ್.ಚಿಕ್ಕಣ್ಣವರ
