ಬಳ್ಳಾರಿ : ಬಳ್ಳಾರಿ ನಗರದ ಆರಾಧ್ಯ ದೈವ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಅವರ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ವೆಂಕಟೇಶ್ ಹೆಗಡೆ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರು, ಕೆಪಿಸಿಸಿ ಮಾಧ್ಯಮ ವಕ್ತಾರ ಹಾಗೂ ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಬಳ್ಳಾರಿ ಪ್ರಚಾರ ಸಮಿತಿಯ ವೆಂಕಟೇಶ್ ಹೆಗಡೆ ಮಾತನಾಡಿ ನಮ್ಮ ನೆಚ್ಚಿನ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ ರವರಿಗೆ ದೇವರು ಆರೋಗ್ಯ ಐಶ್ವರ್ಯ, ಸುಖ, ಶಾಂತಿ ನೆಮ್ಮದಿ ಹಾಗೂ ಶಕ್ತಿ ಯನ್ನು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಬೇಡಿಕೂಂಡೆವು ರಾಜ್ಯದ ಸರ್ವ ಜನರಿಗೆ ಒಳಿತನ್ನು ಮಾಡುವ ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎರುಕುಲ ಸ್ವಾಮಿ, ಸತೀಶ್ ಕಾಂಡ್ರ, ಜೋಗಿನ್ ಚಂದ್ರ, ಈರನಗೌಡ, ಶಾಂತಮ್ಮ ಮಲ್ಲೆಶ್ವರಿ, ವಿರೇಂದ್ರ , ಅಕೀಲ್ ಅಹಮದ್, ಧನುಜಂಯ್ ಹಮಾಲ್, ರಾಜ, ದ್ರಾಕ್ಷಿ ಯಿಣಿ,ರವಿ, ಜೋಗಿನ್ ವಿಜಯ್, ನೂರ್, ಅತಲ್, ವಿರೇಶ್ ಮುಂತಾದವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
