ಹನೂರು: ಪಟ್ಟಣದ ಕೃಷಿ ಪತ್ತಿನ ಸಹಕಾರ ಚುನಾವಣೆ ಬುಧವಾರ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆ ನಡೆಯಿತು. ಇದರಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಕೆ. ರಾಜೂಗೌಡ, ಎಸ್.ಲಿಂಗೇಗೌಡ, ರಂಗಸ್ವಾಮಿ ನಾಯ್ಡು ಟಿ.ಎಸ್. ಮಾದೇಶ್ ನಿರ್ದೇಶಕರುಗಳಾಗಿ ಆಯ್ಕೆಯಾದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಶಾಸಕ ಎಂ. ಆರ್. ಮಂಜುನಾಥ ಹಾಗೂ ಬಿಜೆಪಿ ಮುಖಂಡ ದತ್ತೇಶ್ ಕುಮಾರ್ ಅವರು ಸನ್ಮಾನ ಮಾಡಿದರು.
ಮೊದಲ ಬಾರಿಗೆ ಸಂಘಕ್ಕೆ ಚುನಾವಣೆ:
ಶಾಸಕ ಎಂಆರ್ ಮಂಜುನಾಥ್ ಅವರು ಮಾತನಾಡಿ ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 15 ವರ್ಷದಿಂದಲೂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನಗಳಿಗೆ ಈವರೆಗೂ ಚುನಾವಣೆ
ನಡೆದಿರಲಿಲ್ಲ. ಹಿಂದೆ ಇದ್ದವರು ಕೃಷಿ ಪತ್ತಿನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯನ್ನು ನಡೆಸುತ್ತಿರಲಿಲ್ಲ, ನಾವುಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡವು ಈ ಚುನಾವಣೆಯಲ್ಲಿ ಜನರು ಯಾವುದೇ ರೀತಿಯ ಹಣ ಆಮಿಷಗಳಿಗೆ ಒಳಗಾಗದೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ 5 ಜನರು ನಿರ್ದೇಶಕರಾಗಿ ಗೆದ್ದಿದ್ದಾರೆ. ಈ ಚುನಾವಣೆ ಗೆಲವು ಮುಂದಿನ ಚುನಾವಣೆಗೆ ದಿಕ್ಸೂಚಿ ಆಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ದತ್ತೇಶ್ ಕುಮಾರ್, ರಾಮಪುರ ಬಿಜೆಪಿ ಮಂಡಲ ಅಧ್ಯಕ್ಷ ರಾಜು, ಮುಖಂಡರಾದ ಸಿಂಗನಲ್ಲೂರು ರಾಜಣ್ಣ, ವಿಜಯ್ ಕುಮಾರ್, ಅಮೀನ್, ಗೋವಿಂದ, ವೆಂಕಟೇಶ್, ಕೃಷ್ಣ, ಸತೀಶ್, ಸೇರಿದಂತೆ ಗೆಲುವು ಸಾಧಿಸಿದ ಸದಸ್ಯರು ಹಾಗೂ ಶಾಸಕರ ಅಭಿಮಾನಿ ಬಳಗದವರು ಇದ್ದರು.
ವರದಿ :ಉಸ್ಮಾನ್ ಖಾನ್
