ಯಾದಗಿರಿ/ ಮೋಟ್ನಳ್ಳಿ: ನಿನ್ನೆ ಮೇ.15. ಮೋಟ್ನಳ್ಳಿ ಗ್ರಾಮದ ಇಬ್ಬರು ಯುವತಿಯರು ಬಟ್ಟೆ ತೊಳೆಯಲು ಬಾವಿಗೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಈಜು ಬಾರದೆ ಬಾವಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಮೃತರನ್ನು ವಸಂತಮ್ಮ ತಂದೆ ಲಕ್ಷ್ಮಣ (ಲಚಮಪ್ಪ), 18ವರ್ಷ, ಮೊಟ್ನಳ್ಳಿ ಗ್ರಾಮ, ತಾ॥ಜಿ॥ ಯಾದಗಿರ ಮತ್ತು ಇನ್ನೋರ್ವ ಯುವತಿ ನೆರೆಯ ತೆಲಂಗಾಣ ರಾಜ್ಯದ ಗೋಟಿಲಾ ತಾ॥ ತಾಂಡೂರು ಮೂಲದ ಕು. ನವಿತಾ ತಂದೆ ಮಾಣಿಕಪ್ಪ 16 ವರ್ಷದವರು ಎನ್ನಲಾಗಿದೆ.
ಮೋಟ್ನಳ್ಳಿ ಗ್ರಾಮದ ಸೀಮಾಂತರದಲ್ಲಿರುವ ಹಣಮಂತ್ರಾಯ ವಕೀಲರಿಗೆ ಸೇರಿದ ಬಾವಿಗೆ ಬಟ್ಟೆ ತೊಳೆಯಲು ಹೋಗಿದ್ದರು. ಸುಮಾರು ಸಮಯ ಕಳೆದರೂ ಬಾರದ ಕಾರಣ ಬಾವಿ ಹತ್ತಿರ ನೋಡಿದಾಗ ಅವರ ಬಟ್ಟೆ,ಪಾದರಕ್ಷೆ ಮಾತ್ರ ಸಿಕ್ಕಿರುತ್ತದೆ, ಅನುಮಾನಗೊಂಡು ಬಾವಿಯಲ್ಲಿ ಇಳಿದು ಹುಡುಕಾಡಿದಾಗ ಇಬ್ಬರ ಮೃತದೇಹಗಳು ಬಾವಿಯಲ್ಲಿ ಸಿಕ್ಕಿರುತ್ತವೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಜಗದೀಶ್ ಕುಮಾರ್ ಭೂಮಾ.
