
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ರೆಡ್ಡಿ ಬಾಂಧವರು ಊರಿನ ಪ್ರಮುಖ ಬೀದಿಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರ ಮೆರವಣಿಗೆ ಮಾಡುವುದರ ಮೂಲಕ ಸಂಭ್ರಮದಿಂದ ಆಚರಿಸಿದರು. ಗ್ರಾಮದ ಪ್ರಮುಖರು ಸಾಮೂಹಿಕವಾಗಿ ಶ್ರೀ ಲಿಂಗೈಕ್ಯ ಶ್ರೀ ವಿಜಯ ಮಹಾಂತೇಶ್ವರ ಮಠದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಕಲ ವಾದ್ಯಗಳಾದ ಮುಧೋಳ ತಾಲೂಕಿನ ನಾವಲಗಿ ಹಾಗೂ ವಿಜಯಪುರ ತಾಲೂಕಿನ ಕಾಕಂಡಕಿಯ ಜೈ ಹನುಮಾನ್ ಸಾಂಬಳ ಹಾಗೂ ಹಲಗೆವಾದನ ಸುಮಂಗಲಿಯರ ಕುಂಭ ಕಳಸದ ಸೇರಿದಂತೆ ವಾದ್ಯ ಮೇಳದೊಂದಿಗೆ ಶ್ರೀಮಠದಿಂದ ತೇರಿನ ಮನೆ ಮಲ್ಲಮ್ಮನ ದೇವಸ್ಥಾನ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ನಂತರ ಮಸೂತಿ ಮಾರ್ಗ ವಾಗಿ ಕುಂಬಾರ ಅಂಗಳ ತಲುಪಿ ಅಲ್ಲಿಂದ ಶ್ರೀ ಮಾರುತೇಶ್ವರ ದೇವಸ್ಥಾನ ರಸ್ತೆಯ ಮೂಲಕ ದ್ಯಾಮವ್ವನ ಗುಡಿ ತಲುಪಿ ನಂತರ ಅಮೀನಗಡ ಬೆಳಗಲ್ ರಸ್ತೆಯ ಶ್ರೀ ಮುಪ್ಪಿನ ಸ್ವಾಮಿ ಮಹಾದ್ವಾರದ ಮೂಲಕ ಬಸ್ ನಿಲ್ದಾಣಕ್ಕೆ ಬಂದು ತಲುಪಿ ನಂತರ ಲಿಂ. ವಿಜಯ ಮಹಾಂತ ಶಿವಯೋಗಿಗಳವರ ಮಹಾದ್ವಾರ ಮೂಲಕ ಮರಳಿ ಶ್ರೀ ಮಠಕ್ಕೆ ತಲುಪಿತು
ಹೇಮರೆಡ್ಡಿ ಮಲ್ಲಮ್ಮ, ಜಯಂತೋತ್ಸವದ ನಿಮಿತ್ಯ ಹೋಳಿಗೆ ಹಾಗೂ ಶಿಖರಣಿ ಹಾಗೂ ಮಲ್ಲಮ್ಮನ ಹಂಬಲಿ ಮಹಾಪ್ರಸಾದ ಭಕ್ತರು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಮಸ್ತ ಚಿತ್ತರಗಿ ರೆಡ್ಡಿ ಬಾಂಧವರು ಹಾಗೂ ಗ್ರಾಮದ ಗುರು ಹಿರಿಯರು ಯುವಕ ಮಿತ್ರರು ಮತ್ತು ತಾಯಂದಿರು ಪಾಲ್ಗೊಂಡಿದ್ದರು.
- ಕರುನಾಡ ಕಂದ
