
ಗುರುಮಠಕಲ್/ ನಾರಾಯಣಪೇಟೆ :
ಗುರುಮಠಕಲ್ ಪಟ್ಟಣದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ನೆರೆಯ ತೆಲಂಗಾಣ ರಾಜ್ಯ ಗಡಿಯಲ್ಲಿರುವ ಎಕ್ಲಾಸ್‌ಪುರ ಗ್ರಾಮದ ಬಳಿ ಇಂದು ಶನಿವಾರ ಮಧ್ಯಾಹ್ನ ರಸ್ತೆ ಅಪಘಾತ ಸಂಭವಿಸಿದೆ. ನಾರಾಯಣಪೇಟೆ ಜಿಲ್ಲೆಯ ಸಿರಿಶಾ (10) ಮತ್ತು ಗುರುಮಠಕಲ ತಾಲೂಕ ಶಿವಪುರದ ಹನುಮಂತಿ (50) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಾರಾಯಣಪೇಟೆಯಿಂದ ಕರ್ನಾಟಕಕ್ಕೆ ಬರುತ್ತಿದ್ದ ಕರ್ನಾಟಕ ಕೆಆರ್‌ಟಿಸಿ ಬಸ್, ತಿರುವಿನಲ್ಲಿ ಸುಮಾರು 6 ಪ್ರಯಾಣಿಕರೊಂದಿಗೆ ಗಾಜರಕೊಟ ನಿಂದ ಬರುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಜೀಪಿನಲ್ಲಿದ್ದ ಸಿರಿಷಾ ಮತ್ತು ಹನುಮಂತಿ ಸಾವನ್ನಪ್ಪಿದ್ದಾರೆ.
ನಾರಾಯಣಪೇಟೆ ಪೊಲೀಸರ ತಂಡ ಅಪಘಾತದ ಸ್ಥಳಕ್ಕೆ ಧಾವಿಸಿ, ಅಪಘಾತಕ್ಕೆ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಾರಾಯಣಪೇಟೆ ಜಿಲ್ಲಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ವರದಿ: ಜಗದೀಶ್ ಕುಮಾರ್ ಭೂಮಾ
