ಶಿವಮೊಗ್ಗ : ‘ ಸನಾತನ ರಾಷ್ಟ್ರ ‘ ದ ಜಯ ಘೋಷದ ಜೊತೆಗೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ಕರ್ನಾಟಕದಾದ್ಯಂತ 5000ಕ್ಕೂ ಅಧಿಕ ಹಿಂದುತ್ವನಿಷ್ಠ ರಿಂದ ಗೋವಾದತ್ತ ಪ್ರಯಾಣ !
ಶಿವಮೊಗ್ಗ: ಮಾನವ ಕುಲದ ಪರಮಕಲ್ಯಾಣ ಮತ್ತು ರಾಮರಾಜ್ಯದ ಸ್ಥಾಪನೆಗಾಗಿ ಕಾರ್ಯನಿರತ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ 83 ನೆಯ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ಪ್ರಯುಕ್ತ ಫೊಂಡಾ ಗೋವಾದಲ್ಲಿ ಮೇ 17 ರಿಂದ 19 ರ ವರೆಗೆ ‘ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ‘ ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವವನ್ನು ಫರ್ಮಾಗುಡಿ , ಫೊಂಡಾ ,ಗೋವಾದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಉತ್ಸವದಲ್ಲಿ ಸಹಭಾಗಿಯಾಗಲು ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ, ನ್ಯಾಮತಿ ಸೇರಿದಂತೆ 150 ಸನಾತನ ಸಂಸ್ಥೆಯ ಸಾಧಕರು, ಹಿಂದೂ ಧರ್ಮಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ‘ ಸನಾತನ ರಾಷ್ಟ್ರ ‘ ದ ಜಯ ಘೋಷದ ಜೊತೆಗೆ ಜಿಲ್ಲೆಯಿಂದ 3 ಬಸ್ ಗಳ ಮೂಲಕ ಗೋವಾದ ಕಡೆಗೆ ಪ್ರಯಾಣ ಮಾಡಿದ್ದಾರೆ. ಎಲ್ಲಾ ಹಿಂದುತ್ವ ನಿಷ್ಠರು ಕೇಸರಿ ಟೋಪಿ ಧರಿಸಿದ್ದರು ಮತ್ತು ವಾಹನಗಳು/ಬಸ್ಸು/ರೈಲು/ವಿಮಾನದ ಮೇಲೆ ಕೇಸರಿ ಧ್ವಜ ಹಾರಿಸಿರುವುದರಿಂದ ಸಂಪೂರ್ಣ ವಾತಾವರಣದಲ್ಲಿ ಚೈತನ್ಯ ಮತ್ತು ಶಕ್ತಿಯ ಸಂಚಾರ ಆಗುತ್ತಿತ್ತು.
ಈ ಸಮಯದಲ್ಲಿ ಶಿವಮೊಗ್ಗ ನಗರ ಕ್ಷತ್ರಿಯ ಮರಾಠ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಚೌಹಾಣ್, ಪರಿಸರವಾದಿ ಶ್ರೀ ರಮೇಶ್ , ಸೌ.ಸಾವಿತ್ರಿ ಷಣ್ಮುಖ ಜಿಲ್ಲಾ ಬಾಲ ಗೋಕುಲ ಸಂಯೋಜಕರು ತೀರ್ಥಹಳ್ಳಿ, ಶ್ರೀ ವಾಗೀಶ್ ವಕೀಲರು ಶಿವಮೊಗ್ಗ ಮತ್ತು ಹಿಂದುತ್ವ ನಿಷ್ಠರು ಉಪಸ್ಥಿತರಿದ್ದರು.
