ಬಳ್ಳಾರಿ / ಕಂಪ್ಲಿ : ಜೆಸ್ಕಾಂ ಕಚೇರಿಯಲ್ಲಿ ನಿನ್ನೆ ಸಾರ್ವಜನಿಕ ಹಾಗೂ ಗ್ರಾಹಕರ ಕುಂದುಕೊರತೆ ಸಭೆ ನಡೆಯಿತು. ಈ ಸಂದರ್ಭದಲ್ಲಿ ಅರ್ಜಿಗಳನ್ನು ಅಧಿಕಾರಿಗಳು ಸ್ವೀಕರಿಸಿದರು.
ನಂ.10 ಮುದ್ದಾಪುರ ಗ್ರಾಮದ ಎಸ್‌ಸಿ ಕಾಲೋನಿಯಲ್ಲಿ ಹಾದು ಹೋಗಿರುವ 11 ಕೆ.ವಿ ವಿದ್ಯುತ್ ಲೈನ್ ಕುರಿತು ಸ್ಥಳೀಯರು ಗಂಭೀರ ಕಳವಳ ವ್ಯಕ್ತಪಡಿಸಿದರು. ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ, ಕಬ್ಬಿಣದ ಕಂಬಗಳನ್ನು ಬದಲಾಯಿಸಿ ಸಿಮೆಂಟ್ ಕಂಬಗಳನ್ನು ಅಳವಡಿಸಬೇಕು, ವಿದ್ಯುತ್ ಕಂಬಗಳು ಮನೆಗಳು ಹಾಗೂ ಹುಲ್ಲಿನ ಬಣವೆಗಳ ಪಕ್ಕದಿಂದ ಹಾದು ಹೋಗುತ್ತಿದ್ದು, ಆಗಾಗ ಬೆಂಕಿ ಕಾಣಿಸಿಕೊಂಡಿರುವ ಘಟನೆಗಳು ನಡೆದಿದೆ. ಇದರಿಂದ ನಾಗರಿಕರು ಆತಂಕದಲ್ಲಿದ್ದಾರೆ ಎಂದು ಮುದ್ದಾಪುರ ಗ್ರಾಮಸ್ಥರು ಅರ್ಜಿ ಸಲ್ಲಿಸಿದರು.
ಅರ್ಜಿಗಳನ್ನು ಸ್ವೀಕರಿಸಿದ AEE ಅಧಿಕಾರಿಗಳು ಮಾತನಾಡುವಾಗ, “ಈ ಎಲ್ಲಾ ಅರ್ಜಿಗಳನ್ನು ನಾವು ಶೀಘ್ರದಲ್ಲೇ ಪರಿಶೀಲಿಸಿ, ತಕ್ಷಣ ಕ್ರಮ ಕೈಗೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್
