
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮ ಪಂಚಾಯತಿಗೆ ಗ್ರಾಮಸ್ಥರು ಬೀಗ ಜಡಿದು, ಮುಳ್ಳು ಕಂಟಿ ಹಚ್ಚಿ, ಪಂಚಾಯತಿ ಸಿಬ್ಬಂದಿಯನ್ನು ಹೊರ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಗರಖೇಡ ಗ್ರಾಮದ ವಾರ್ಡ್ ನಂಬರ್ 1 ರಲ್ಲಿ ರಸ್ತೆ ಸುಧಾರಣೆ ಇಲ್ಲದೆ ಜನರು ನಡೆದಾಡುವುದಕ್ಕೂ ತುಂಬಾ ತೊಂದರೆಯಾಗುತ್ತಿದೆ ಹಾಗೂ ಯಾವದೇ ವಾಹನಗಳು ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಲು ಆಗುತ್ತಿಲ್ಲ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ, ಹೆಣ್ಣು ಮಕ್ಕಳು ಬಹಿರ್ದೆಸೆಗೆ ಹೋಗಲು ತುಂಬಾ ತೊಂದರೆ ಇದೆ ಎಂದು ಗ್ರಾಮಸ್ಥರು ಎಷ್ಟೋ ಸಲ ಮೌಖಿಕವಾಗಿ ತಮ್ಮ ಅಳಲನ್ನು ತೋಡಿಕೊಂಡರೂ ಗ್ರಾಮ ಪಂಚಾಯತಿ ಸದಸ್ಯರು, ಪಿ .ಡಿ.ಓ ಅವರೂ ಸಮಸ್ಯೆಯನ್ನು ಬಗೆಹರಿಸಿರುವುದಿಲ್ಲ.
ಆದ ಕಾರಣ ರೊಚ್ಚಿಗೆದ್ದ ಗ್ರಾಮಸ್ಥರು ಇಂದು ಪಂಚಾಯತಿಗೆ ಬೀಗ ಜಡಿದು ರಸ್ತೆ ಸಂಚಾರ ಬಂದು ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಬಾಬುಗೌಡ ಪಾಟೀಲ್, ಮೌಲಾ ಬೀಜಲಿ,ಪ್ರಭುಗೌಡ ಪಾಟೀಲ್, ತುಕಾರಾಂ ಬೋಸಲೇ, ವಿನಾಯಕ್ ಪಾಟೀಲ್, ತಿಪ್ಪಣ್ಣ ಕೌಲಗಿ, ಯಲ್ಲಾಲಿಂಗ ಕೌಲಗಿ, ಸಮೀರ್ ಕೋ ರಬು, ಶ್ರೀಶೈಲ ಪಾರೇಕಾರ್, ಚಂದು ಪಾರೆಕಾರ್, ಇಮಾಮಸಾಬ ಮುಲ್ಲಾ, ಅರುಗೌಡ ಪಾಟೀಲ್, ಪ್ರಕಾಶ್ ಪಾಟೀಲ್, ಕಾಂತು ಕೋಟಿ, ಪ್ರಕಾಶ್ ಪಾಟೀಲ್, ಇಮಾಮಸಾಬ ಕೊರಬು, ಆರಿಫ್ ಆಗರ ಖೇಡ, ಆರಿಫ್ ಮುಲ್ಲಾ, ಹಾಗು ಗ್ರಾಮದ ಹಿರಿಯರು, ಮುಖಂಡರು, ಯುವಕರು, ಗ್ರಾಮಸ್ಥರು ಪಾಲ್ಗೊಂಡಿದ್ದಾರೆ.
