ಪೌರಾಡಳಿತ ಸಚಿವರ ಭೇಟಿ ನಂತರ ಮಹತ್ವದ ಬೆಳವಣಿಗೆ! ಭ್ರಷ್ಟರ ವಿರುದ್ಧ ಹೊರಡಲು ಸಚಿವರ ಭರವಸೆ ನುಡಿಗಳು ಪುಷ್ಟಿ ನೀಡಿದವೇ?
ಬಿ- ಖಾತಾ ಮಾಡುವಲ್ಲಿ ಕೋಟ್ಯಾಂತರ ಅವ್ಯವಹಾರವಾಗಿದೆಯೇ?
ಯಾದಗಿರಿ/ ಗುರುಮಠಕಲ್ : ಸರ್ಕಾರ ಬಡವರಿಗೋಸ್ಕರ ಅನುಕೂಲವಾಗುವ ಉದ್ದೇಶದಿಂದ ಅವರಿಗೆ ಖಾಲಿ ಜಾಗ ಇದ್ದು ಅವರ ಹೆಸರಿನ ಮೇಲೆ ಮಾಡಿಕೊಳ್ಳಲಿ ಅನ್ನುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ B ಮತ್ತು E ಖಾತಾ ಮಾಡಲಿ ಅಂತ ಮೂರು ತಿಂಗಳ ಕಾಲಾವಕಾಶ ಕೊಟ್ಟಿತ್ತು ಆದರೆ ಇಲ್ಲಿ ಪುರಸಭೆ ವತಿಯಿಂದ ಅಧಿಕಾರಿಗಳು ಸರ್ಕಾರ ಶುಲ್ಕ 100 ರುಪಾಯಿ ಇದ್ರೆ ಇಲ್ಲಿ ಒಂದು PID number ಗೆ 35000 ಇಂದ 80,000 ರೂಪಾಯಿಗಳು ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಜಯಕುಮಾರ್ ನೀರೇಟಿ ಮಾಜಿ ಕಾಡಾ ನಿರ್ದೇಶಕರು ಓಬಿಸಿ ಅಧ್ಯಕ್ಷರು ಗುರುಮಠಕಲ್ ಒತ್ತಾಯಿಸಿದ್ದಾರೆ.
ಗುರುಮಠಕಲ್ ಹೇಳಿ ಕೇಳಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆಯವರ ಕ್ಷೇತ್ರ ರಾಜ್ಯ ಸರ್ಕಾರದ ಬಿ ಖಾತೆ ಹಂಚಿಕೆ ಯೋಜನೆಯನ್ನು , ಇಲ್ಲಿನ ಗುರುಮಠಕಲ್ ಪುರಸಭೆಯ ಅಧಿಕಾರಿಗಳು ಮತ್ತು ಸದಸ್ಯರು ಭಾಗಿಯಾಗಿ ನಾನಾ ಕಾರಣ ಕೊಟ್ಟು ಕೇವಲ ಪಿಐಡಿ ನಂಬರ್ ನೀಡಲು ಸಹ ಅಧಿಕ ಮೊತ್ತದಲ್ಲಿ ಹಣ ಪಡೆಯುತ್ತಿರುವುದು ಇಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ, ಈ ಕುರಿತಾದ ಸಮಗ್ರ ತನಿಖೆ ಆಗಬೇಕು, ಭ್ರಷ್ಟ ಅಧಿಕಾರಿಗಳ ಎಡೆಮುರಿ ಕಟ್ಟಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಅಧಿಕಾರಿಗಳು ಬಡವರಿಗೆ ಬಿಟ್ಟು ಶ್ರೀಮಂತರ ಹೊಲಗಳಿಗೆ ಸರ್ವೇ ನಂಬರ್ ಗಳಿಗೆ PID number ತೆಗೆದುಕೊಂಡಿದ್ದಾರೆ ಅಂತ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಬಿ ಖಾತೆ ಹೆಸರಿನಲ್ಲಿ ಅಧಿಕಾರಿಗಳ ಅಕ್ರಮ ಮಾರ್ಗವಾಗಿ ಹಣ ವಸೂಲಿ ಮಾಡುವ ದಂಧೆಗಿಳಿದಿದ್ದಾರೆ.
NA ಮಾಡಿಸಿದರೆ ರೋಡ್, ಗಾರ್ಡನ್, ಟೆಂಪಲ್ ಗೆ ಪ್ಲಾಟ್ ಕೊಡಬೇಕು ಇಲ್ಲಿ 60-80 ಸಾವಿರ ಕೊಟ್ಟು By number ಹಾಕಿಸಿ PID number ತೆಗೆದುಕೊಂಡರೆ ಸಾಕು ಅಂತ ಕೆಲವೊಂದು ಸರ್ವೇ ನಂಬರ್ ಗಳಿಗೆ PID ತೆಗೆದುಕೊಂಡಿದ್ದಾರೆ, ಇಲ್ಲಿಯ ವರೆಗೆ 90 ದಿನಗಳಲ್ಲಿ ಎಷ್ಟು B-E ಖಾತಾ ಕೊಟ್ಟಿದ್ದಾರೆ ಎಷ್ಟು ಲೀಗಲ್ ಆಗಿ ಮಾಡಿದ್ದಾರೆ ಅಷ್ಟು ಇಲ್ಲೀಗಲ್ ಆಗಿ ಮಾಡಿದ್ದಾರೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಂಬಂಧ ಪಟ್ಟ ಅಧಿಕಾರಿಗಳು ಬೇಜವಾಬ್ದಾರಿ ತೋರಿಸಿದ್ದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಟೀಮ್ ಮಾಡಿ 90 ದಿನಗಳಲ್ಲಿ ಎಷ್ಟು B-E ಖಾತಾ ಮಾಡಿದ್ದಾರೆ, ಸರ್ಕಾರ ಶುಲ್ಕ ಬಿಟ್ಟು ಎಷ್ಟೆಷ್ಟು ಹಣ ವಸೂಲಿ ಮಾಡಿದ್ದಾರೆ ಒಂದು ಲೀಸ್ಟ್ ತೆಗೆದುಕೊಂಡು ಎಷ್ಟು PID number ಕೊಟ್ಟಿದ್ದಾರೆ ಎಂದು ಪಟ್ಟಣದ 23 ವಾರ್ಡ್ಗಳಲ್ಲಿ ಮನೆ – ಮನೆಗೂ ತಿರುಗುತ್ತೇವೆ ಎಂದು ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
