ಬೆಳಗಾವಿ/ ಬೈಲಹೊಂಗಲ: ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಪ್ರತಿ ನಿತ್ಯ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವುದು ಸಹಜ ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಹೂಲಿ ಕರೆ ನೀಡಿದರು.
ಬೈಲಹೊಂಗಲ ತಾಲೂಕಿನ ಗ್ರಾಮ ಪಂಚಾಯತ ಸುತಗಟ್ಟಿ ವ್ಯಾಪ್ತಿಯ ಹಣಮ್ಯಾನಹಟ್ಟಿ ಗ್ರಾಮದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೂಲಿಕಾರ್ಮಿಕರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮ ಆರೋಗ್ಯ ಅಭಿಯಾನದಡಿಯಲ್ಲಿ “ಆರೋಗ್ಯವೇ ಭಾಗ್ಯ” ಕಾರ್ಯಕ್ರಮದನ್ವಯ ಆರೋಗ್ಯ ತಪಾಸಣೆಯನ್ನು ಮಾಡುವ ಮೂಲಕ ಕೂಲಿಕಾರರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡತೆಯನ್ನು ಹೆಚ್ಚಿಸಿದಂತಾಗುತ್ತದೆ ಮತ್ತು ಯಾವುದೇ ಒತ್ತಡಗಳಿಗೆ ಒಳಗಾಗದೇ ಪ್ರತಿ ನಿತ್ಯವು ಕೆಲಸಕ್ಕೆ ಬಂದು 100 ದಿವಸ ಪೂರೈಸಿಕೊಂಡು ಪ್ರತಿ ದಿನ 370/- ರೂ ನಂತೆ ವಾರ್ಷಿಕವಾಗಿ 37,000/- ರೂ ಕೂಲಿ ಪಡೆಯಬಹುದು ಎಂದು ಕರೆ ನೀಡಿದರು.
ಕೂಲಿಕಾರರ ಅನಕೂಲಕ್ಕಾಗಿ ನರೇಗಾ ಕಾಮಗಾರಿ ಸ್ಥಳದಲ್ಲಿ ಇಂತಹ ಶಿಬಿರ ಹಾಗೂ ಅಭಿಯಾನಗಳನ್ನು ಹಮ್ಮಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಜನಸಾಮಾನ್ಯರಿಗೆ ಜಾಗೃತಿಗಳನ್ನು ಮೂಡಿಸುವುದರಿಂದ ನರೇಗಾ ಕೆಲಸಕ್ಕೆ ಕೈಜೋಡಿಸಬೇಕು ಎಂದು ಸಹಾಯಕ ನಿರ್ದೇಶಕರು (ಗ್ರಾ. ಉ) ವಿಜಯ ಪಾಟೀಲ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವನಜಾಕ್ಷಿ ಪಾಟೀಲ, ಕಾರ್ಯದರ್ಶಿ ವಿರುಪಾಕ್ಷ ಪಟೇದ, ಆರೋಗ್ಯ ನೀರಿಕ್ಷಣಾಧಿಕಾರಿ ಅನಿತಾ ಗಾಣಿಗೇರ, ಈಶ್ವರ ತುಳಜನ್ನವರ ನರೇಗಾ ತಾಂತ್ರಿಕ ಸಂಯೋಜಕ ನಾಗರಾಜ್ ಯರಗುದ್ದಿ, ಗ್ರಾ. ಪಂ. ಸಿಬ್ಬಂದಿಗಳು ಹಾಗೂ ನರೇಗಾ ಕೂಲಿಕಾರ್ಮಿಕರು ಹಾಜರಿದ್ದರು.
ವರದಿ : ಭೀಮಸೇನ ಕಮ್ಮಾರ
