ಹೊಸಪೇಟೆ : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20 ರಂದು ಸರ್ಕಾರದ ಸಾಧನಾ ಸಮಾವೇಶ ನಡೆಯುತ್ತಿರುವ ಹಿನ್ನೆಲೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭಾಷಣ ಮಾಡಿದ್ದ ಇದೇ ಮೈದಾನದ ಕಟ್ಟೆಗೆ ಈಗ ಹೊಸ ರೂಪ ನೀಡಲಾಗುತ್ತಿದ್ದು, ಅಮೃತ ಶಿಲೆಯಲ್ಲಿ ಇಂದಿರಾ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಇಂದಿರಾ ಗಾಂಧಿ ಅವರು 80ರ ದಶಕದಲ್ಲಿ ಈ ಕ್ರೀಡಾಂಗಣದಲ್ಲಿ ಭಾಷಣ ಮಾಡಿದ್ದರು. ಅವರು ಭಾಷಣ ಮಾಡಿದ ಕಟ್ಟೆಗೆ ಇಂದಿರಾ ಗಾಂಧಿ ಕಟ್ಟೆ ಎಂದೇ ಕರೆಯಲಾಗುತ್ತಿತ್ತು. ಈ ಕಟ್ಟೆಯಲ್ಲಿ ಸೋನಿಯಾ ಗಾಂಧಿ ಅವರು ಕೂಡಾ ಭಾಷಣ ಮಾಡಿದ್ದಾರೆ. ಈ ಕಟ್ಟೆಯನ್ನು ಸಂರಕ್ಷಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಣ್ಣದಮನೆ ಸೋಮಶೇಖರ ಒತ್ತಾಯಿಸಿದ್ದರು. ಇವರ ಮನವಿಗೆ ಸ್ಪಂದಿಸಿ ಸಚಿವ ಜಮೀರ್ ಅಹಮದ್ ಖಾನ್, ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್ ಹಾಗೂ ಶಾಸಕ ಎಚ್. ಆರ್. ಗವಿಯಪ್ಪ ಅವರು ಅಭಿವೃದ್ಧಿಪಡಿಸಿದ್ದಾರೆ.
ಹೊಸಪೇಟೆ ನಗರದಲ್ಲಿ ಮೇ 20 ರಂದು ಜರುಗಲಿರುವ ಸಾಧನಾ ಸಮಾವೇಶ ಸಮಾರಂಭದ ಅನಾವರಣಗೊಳಿಸಲಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
