ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಶಿರಶ್ಯಾಡ ಸಾರ್ವಜನಿಕರು ಆರೋಗ್ಯಕರ ಜೀವನ ನಡೆಸಲು ಅಗತ್ಯವಾಗಿ ಬೇಕಿರುವ ಮೂಲಸೌಕರ್ಯಗಳಲ್ಲಿ ಒಂದಾದ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ನಾಗರಿಕರು ತೀವ್ರ ತೊಂದರೆಗೆ ಸಿಲುಕಿ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನತೆ ಕಂಗಾಲಾಗಿದ್ದಾರೆ.
ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಚರಂಡಿಗಳಲ್ಲಿ ಕೊಳಚೆ ನೀರು ಒಂದಿಂಚು ಮುಂದಕ್ಕೆ ಹರಿದು ಹೋಗುತ್ತಿಲ್ಲ, ಕೊಳಚೆ ನೀರಿನ ದುರ್ನಾತಕ್ಕೆ ನಿವಾಸಿಗಳು ಮೂಗು ಮುಚ್ಚಿಕೊಂಡು ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ, ಶ್ರೀ ಬಸವೇಶ್ವರ ದೇವಸ್ಥಾನ ಮುಂದಗಡೆ ಇರುವ ಚರಂಡಿ ಸ್ವಚ್ಚತೆ ಮಾಯವಾಗಿರುವ ಕಾರಣ ಪ್ರತಿನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ.
ರಾತ್ರಿಯಾದರೆ ಸೊಳ್ಳೆಗಳ ಕಾಟ, ತಿನ್ನುವ ಆಹಾರಕ್ಕೂ ಹುಳಗಳ ಕಾಟ ತಾಳಲಾರದೆ ಬೇಸತ್ತಿದ್ದಾರೆ. ಚರಂಡಿ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ. ಈ ಕಾರಣಕ್ಕೆ ಪಟ್ಟಣದ ಜನರು ವ್ಯವಸ್ಥೆಯ ವಿರುದ್ಧ ಪ್ರತಿನಿತ್ಯ ಆಕ್ರೋಶ ಹೊರಹಾಕುತ್ತಿದ್ದಾರೆ.
ವರದಿ. ಅರವಿಂದ್ ಕಾಂಬಳೆ
