ಸಂಬಂಧಪಟ್ಟ ಅದಿಕಾರಿಗಳ ವಿರುದ್ದ ವಾಹನ ಸವಾರರು, ಗ್ರಾಮಸ್ಥರ ಅಕ್ರೋಶ
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನದ್ಯಾಂತ ಶನಿವಾರ ರಾತ್ತಿ ಸಾಧರಣ ಮಳೆ ಆಗಿರುವುದರಿಂದ ತಾಲೂಕಿನ ಅಯ್ಯನಹಳ್ಳಿ ಗ್ರಾಮದ ರೈಲ್ವೆ ಬಿಡ್ಜ್ ಬಳಿ ಸುಮಾರು 15 ವರ್ಷದಿಂದ ಮಳೆ ಬಂದರೆ ಸಾಕು ಈ ರಸ್ತೆ ತಗ್ಗು ಗುಂಡಿಗಳಿಲ್ಲಿ ಮಳೆ ನೀರು ನಿಂತು ಸಣ್ಣ ಕೆರೆಯಂತೆ ನೀರು ತುಂಬಿ ಬಿಡುತ್ತದೆ ಪ್ರತಿದಿನ ನಿತ್ಯ
ಈ ರಸ್ತೆಯಲ್ಲಿ ಓಡಾಡುವ ಅಯ್ಯನಹಳ್ಳಿ ಗ್ರಾಮಸ್ಥರು, ತಮ್ಮ ತಮ್ಮ ಹೊಲಗಳಿಗೆ ಹೋಗುವಾಗ ಮತ್ತು ಅಯ್ಯನಹಳ್ಳಿಯಿಂದ ಕನ್ನಕಟ್ಟಿ, ಆಲದಳ್ಳಿ , ಮತ್ತಳ್ಳಿ, ಗ್ರಾಮಸ್ತರು ತಮ್ಮ ಗ್ರಾಮಗಳಿಗೆ ತಲುಪಲು ಇದೇ ರಸ್ತೆಯ ಮೂಲಕ ಈ ರಸ್ತೆಯಲ್ಲಿ ಎಷ್ಟೋ ಬೈಕ್ ಸವಾರರು ಈ ರಸ್ತೆಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಹಾನಿಗಳಿಗೆ ಒಳಗಾಗಿದ್ದಾರೆ ಅದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ
ಈ ರಸ್ತೆಯ ತಗ್ಗು ಗುಂಡಿಗಳು ಮುಚ್ಚಿಸುವುದಕ್ಕೆ ಮುಂದಾಗುತ್ತಿಲ್ಲ ಸಾರ್ವಜನಿಕರು ಓಡಾಡಲು ಸ್ವಚ್ಛತಾ ರಸ್ತೆಯನ್ನಾಗಿ ನಿರ್ಮಾಣ ಮಾಡಿ ಕೊಡಲು ಸಂಬಂಧಪಟ್ಟ ಅಧಿಕಾರಿಗಳು, ಶಾಸಕರಾಗಲಿ, ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿಗಳಾಗಲಿ , ಜನಪ್ರತಿನಿಧಿಗಳಾಗಲಿ, ಮಾತ್ರ ಇತ್ತ ಕಡೆ ಗಮನಹರಿಸುತ್ತಿಲ್ಲ ಸುಮಾರು ವರ್ಷಗಳಿಂದ ಇಲ್ಲಿನ ಪರಿಸ್ಥಿತಿ ನೋಡಿದ್ದರು ಸಮೇತ ನೋಡದ ಹಾಗೆ ಅಧಿಕಾರಿಗಳು ಜನಪ್ರತಿನಿಧಿಗಳು ಕಣ್ಣು ಮುಚ್ಚಿಕೊಂಡು ಓಡಾಡುತ್ತಾರೆ ಅನಿಸುತ್ತದೆ
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಎಚ್ಚತ್ತಿಕೊಂಡು ಈ ರಸ್ತೆ ಯಲ್ಲಿ ಬೈಕ್ ಸವಾರರು , ರೈತರು ತಮ್ಮ ತಮ್ಮ ಹೊಲಗಳಿಗೆ ಓಡಾಡಲು ಈ ರಸ್ತೆ ಈಗ ತುಂಬಿದ ಕೆರೆಯಾಗಿದೆ ಈ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದಾರೆ ಈ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಅತೀ ಶೀಘ್ರದಲ್ಲಿ ಮುಚ್ಚಿ ಸ್ವಚ್ಛತೆ ರಸ್ತೆಯನ್ನಾಗಿ ನಿರ್ಮಾಣ ಮಾಡಿ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ಕಚೇರಿಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಸಾರ್ವಜನಿಕರು ಅಯ್ಯನಹಳ್ಳಿ ಗ್ರಾಮಸ್ಥರಾದ ಅಟೋ ರಾಜ, P ಸಂತೋಷ , A ಪ್ರಕಾಶ , S ಕೊಟ್ರೇಶಿ , ರವಿ ಕುಮಾರ , ಕನ್ನಕಟ್ಟಿ ಶಿವಮೂರ್ತಿ ,ರಾಮಚಂದ್ರಪ್ಪ, ಕರೇಗೌಡ ರವರು ಪತ್ರಿಕೆಯೊಂದಿಗೆ ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುಧ್ದ ಅಕ್ರೋಶ ವ್ಯಕ್ತಪಡಿಸಿದರು.
ವರದಿ ಶಶಾಂಕ್
