ಯಾದಗಿರಿ/ಗುರುಮಠಕಲ್: ಪಟ್ಟಣದ ಸರ್ವೆ ನಂಬರ್ 90 ರಲ್ಲಿ ಬರುವ ಕೆಲವು ನಿವೇಶನಗಳು, ಕೆಲ ಖಾಲಿ ಸ್ಥಳಗಳು ಸಂಪೂರ್ಣ ಪುರಸಭೆಯ ಅಸ್ತಿಯಾಗಿದ್ದು ಮತ್ತು 91 ಸಂಪೂರ್ಣ ಸರಕಾರಿ ಜಮೀನಾಗಿದ್ದು ಈ ಜಮೀನನ್ನು ಸರ್ಕಾರದ ಕೆಲ ಇಲಾಖೆಗಳಿಗೆ ಕಾಯ್ದಿರಿಸಲಾಗಿದೆ, ಸರಕಾರದ ಹೊಸ ಬಿ-ಖಾತಾ ಹಂಚಿಕೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಕೆಲ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ವಾಮ ಮಾರ್ಗ ಬಳಸಿ ತಮ್ಮ ಹೆಸರಿಗೆ ಸರಕಾರಿ ನಿವೇಶನಗಳನ್ನು ಮಾಡಿಕೊಳ್ಳುವ ದುರುದ್ದೇಶದಿಂದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಬಿ- ಖಾತಾ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಈಗಾಗಲೇ ಅವರು ಆ ನಿವೇಶನಗಳನ್ನು ಬಳಕೆ ಮಾಡುತ್ತಿದ್ದು ಕೆಲವರು ಖಾಲಿ ಸ್ಥಳಗಳಲ್ಲಿ ಮನೆಗಳು ಸಹ ನಿರ್ಮಾಣ ಮಾಡಿ ಕೊಂಡಿದ್ದಾರೆ ಇನ್ನು ಕೆಲವರು ಕಬ್ಜಾ ಮಾಡಿ ತಮ್ಮ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಖೊಟ್ಟಿ ದಾಖಲೆ ಸೃಷ್ಟಿಸಿ ಬಿ – ಖಾತಾ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಸರಕಾರಿ ಸ್ಥಳಗಳನ್ನು ಅತಿಕ್ರಮಿಸಿ ಈಗಾಗಲೇ ಸೃಷ್ಟಿಸಲಾದ ಖೊಟ್ಟಿ ದಾಖಲೆಗಳಿಗೆ ಬಿ- ಖಾತಾ ನೀಡಬೇಕೆಂಬ ನಿರ್ದೇಶನ ಕೂಡಾ ಸರಕಾರ ಮಾಡಿರುವುದಿಲ್ಲ ಅದು ಅಪರಾಧವಾಗಿರುತ್ತದೆ ಹೀಗಿರುವಾಗ ಸರಕಾರ ವಿವಿಧ ಇಲಾಖೆಗಳ ಅನುಕೂಲಕ್ಕಾಗಿ ಕಾಯ್ದಿರಿಸಿದಂತಹ ಸ್ಥಳಗಳ ಸಂರಕ್ಷಣೆ ಸಾರ್ವಜನಿಕರಿಗಿಂತ ಸರಕಾರಿ ಅಧಿಕಾರಿಗಳೇ ಹೆಚ್ಚು ನಿಗಾ ವಹಿಸಬೇಕಾಗಿದೆ ಯಾವುದೇ ಕಾರಣಕ್ಕೂ ಬಿ- ಖಾತಾ ಹಂಚಿಕೆ ಮಾಡಬಾರದು ಎಂದು ಗುರುಮಠಕಲ್ ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀಮತಿ ಭಾರತಿ ದಂಡೋತಿ ಹಾಗೂ ಗುರುಮಠಕಲ್ ಉಪ ತಹಶೀಲ್ದಾರ್ ನರಸಿಂಹಸ್ವಾಮಿ ಅವರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ಇವರಿಗೆ ಮನವಿಯನ್ನು ಸಂಜೀವ್ ಕುಮಾರ್ ಅಳೆಗಾರ್ ಸಾಮಾಜಿಕ ಕಾರ್ಯಕರ್ತ ಮತ್ತು ರಾಮು ಕೊಡಗಂಟಿ ಸಾಮಾಜಿಕ ಕಾರ್ಯಕರ್ತ ಮನವಿ ನೀಡಿದ್ದಾರೆ.
ಮುಖ್ಯಾಧಿಕಾರಿಗಳಾದ ಶ್ರೀಮತಿ ಭಾರತಿ ದಂಡೋತಿ ಈ ಮನವಿ ಕುರಿತಾಗಿ ಪ್ರತಿಕ್ರಿಯೆ ನೀಡಿ ಗುರುಮಠಕಲ್ ಪಟ್ಟಣದ ಸರ್ವೇ ಸಂಖ್ಯೆ 90ರಲ್ಲಿ ಸರಕಾರಕ್ಕೆ ಸಂಬಂಧಿಸಿದ ಸ್ಥಳಗಳನ್ನು ಅತಿಕ್ರಮಿಸಿದ ಸ್ಥಳಗಳಿಗೆ ಯಾವುದೇ ಕಾರಣಕ್ಕೂ ಬಿ- ಖಾತಾ ನೀಡುವುದಿಲ್ಲ ಹಾಗೂ ಸರ್ವೇ91 ಸಂಪೂರ್ಣ ಸರಕಾರಿ ಜಮೀನು ಆಗಿದ್ದು, ಅದಕ್ಕೂ ಸಹ ಬಿ-ಖಾತಾ ಆಗಲಿ ಇನ್ನಾವುದಾಗಲಿ ನೀಡುವದಿಲ್ಲ, ಸರಕಾರಿ ಜಮೀನು ವಶ ಪಡಿಸಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಮನವಿದಾರರಿಗೆ ಭರವಸೆ ನೀಡಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
