ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಚ್ಚರ! ಹೆಚ್ಚುತ್ತಿವೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌: ಡೌನ್‌ಲೋಡ್‌ ಮಾಡಿದ್ರೆ ನಿಮ್ಮ ಹಣ ಮಾಯ ಖಚಿತ!

ತಂತ್ರಜ್ಞಾನ ಕ್ಷೇತ್ರದಲ್ಲಿಯ ಹೊಸ ಹೊಸ ಆವಿಷ್ಕಾರಗಳೊಂದಿಗೆ, ಸೈಬರ್ ವಂಚನೆಯೂ ಸಹ ಅಷ್ಟೆ ಮಿತಿ ಮೀರುತ್ತಿದೆ. ಒಂದು ವಿಧಾನದ ಕಳ್ಳತನಕ್ಕೆ ಬ್ರೇಕ್‌ ಹಾಕುವಷ್ಟರಲ್ಲಿ ಮತ್ತೊಂದು ವಿಧಾನವನ್ನು ಈ ಸೈಬರ್‌ ವಂಚಕರು ಕಂಡುಕೊಳ್ಳುತ್ತಿದ್ದಾರೆ. ಇದು ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿದ್ದು, ಸಾರ್ವಜನಿಕರ ಹಣಕ್ಕೆ ಕನ್ನ ಹಾಕುವ ಹಲವು ಮಾರ್ಗಗಳನ್ನು ಸೈಬರ್‌ ವಂಚಕರು ಕಂಡುಕೊಂಡಿದ್ದಾರೆ. ಆತಂಕಕಾರಿ ವಿಷಯವೆಂದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿಯೇ ಸುಮಾರು 10,300 ಕೋಟಿ ರೂ ಅನ್ನು ಸೈಬರ್ ಖದೀಮರು ಬ್ಯಾಂಕ್‌ ಖಾತೆಗೆ ಖನ್ನ ಹಾಕಿ ದೋಚಿದ್ದಾರೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ವರದಿ ನೀಡಿದೆ.

ಜನರ ಬ್ಯಾಂಕ್‌ ಹಣ ಕದಿಯುವಲ್ಲಿ ಸೈಬರ್ ವಂಚಕರು ಈಗ ಹೆಚ್ಚಾಗಿ ಬಳಸುತ್ತಿರುವ ವಿಧಾನದಲ್ಲಿ – ಕೆವೈಸಿ ಅಪ್‌ಡೇಟ್‌ ಮಾಡುವುದಾಗಿ ಹೇಳಿ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌ ಲಿಂಕ್‌ ಅನ್ನು ಮೆಸೇಜ್‌ ಕಳುಹಿಸಿ ಅದನ್ನು ಡೌನ್‌ಲೋಡ್ ಮಾಡಿಸಿ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುವುದು ಈಗ ಹೆಚ್ಚಾಗಿದೆ.

ಕೆನರಾ ಬ್ಯಾಂಕ್, ಐಸಿಐಸಿಐ ಸೇರಿ ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳ ಹೆಸರಲ್ಲಿ ನಕಲಿ ಅಪ್ಲಿಕೇಶನ್‌ ಡೆವಲಪ್‌ ಮಾಡಿ, ಅದನ್ನು ಡೌನ್‌ಲೋಡ್ ಮಾಡಿಸಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಹುನ್ನಾರ ಹೆಚ್ಚಾಗಿದೆ. ಆದ್ದರಿಂದ ಅನಾಮಧೇಯ ಹಾಗೂ ಅನುಮಾನಾಸ್ಪದ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್‌, ಇನ್‌ಸ್ಟಾಲ್‌ ಮಾಡಿಕೊಳ್ಳಬಾರದು ಎಂದು ಬ್ಯಾಂಕ್‌ಗಳು ಹಾಗೂ ಸೈಬರ್ ಪೊಲೀಸರು ಸೂಚನೆ ನೀಡಿದ್ದಾರೆ.

ಬ್ಯಾಂಕ್‌ ಖಾತೆಗೆ ಕನ್ನ ಹಾಕಲು ಹೇಗೆಲ್ಲಾ ವಂಚನೆ ನಡೆಯುತ್ತದೆ?

ಪ್ರಮುಖ ಪ್ರಧಾನ ಬ್ಯಾಂಕ್‌ಗಳ ಲೋಗೋ ಬಳಸಿ ಬ್ಯಾಂಕಿಂಗ್ ಅಪ್ಲಿಕೇಶನ್ ಸೃಷ್ಟಿಸಲಾಗುತ್ತದೆ.
ಕಸ್ಟಮರ್ ಸರ್ವೀಸ್‌ ಪಾಯಿಂಟ್ ಎಂಬ ನಕಲಿ ಅಪ್ಲಿಕೇಶನ್‌ ಪ್ಯಾಕೇಜ್‌ಗಳನ್ನು ಸೃಷ್ಟಿಸಿಕೊಂಡು, ಅದನ್ನ ಡೌನ್‌ಲೋಡ್‌ ಮಾಡಿಸುವ ಪ್ರಯತ್ನ ಮಾಡುತ್ತಾರೆ.
ವಾಟ್ಸಾಪ್, ಟೆಲಿಗ್ರಾಂ, ಸಾಮಾಜಿಕ ಜಾಲತಾಣಗಳ ಬಳಕೆ ಮೂಲಕ ವಂಚನೆ ಸಾಧ್ಯ. ಅವುಗಳ ಮುಖಾಂತರ ನಕಲಿ ಎಪಿಕೆ ಫೈಲ್‌ ಅನ್ನು ಕಳುಹಿಸುತ್ತಾರೆ.
ನಿಮ್ಮ ಮೊಬೈಲ್ ನಲ್ಲಿ ಮೊದಲು ಆ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿಸುತ್ತಾರೆ. ಆಧಾರ್‌ ಕೆವೈಸಿ, ಪಾನ್‌ಕಾರ್ಡ್‌ ವಿವರ, ನಂಬರ್ ಅಪ್‌ಡೇಟ್‌ ಮಾಡಿಸುತ್ತಾರೆ. ನಂತರ ಮೊಬೈಲ್‌ನಲ್ಲಿ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಆಗುತ್ತಿದ್ದಂತೆ ಖಾತೆ ವಿವರ ಪಡೆಯುತ್ತಾರೆ. ಆಮೇಲೆ ನೇರವಾಗಿ ಬ್ಯಾಂಕ್‌ ಖಾತೆಯಲ್ಲಿನ ನಿಮ್ಮ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ.

ಬ್ಯಾಂಕ್‌ ಖಾತೆಯಲ್ಲಿ ಹಣ ಕಳವಾದರೆ ಏನು ಮಾಡಬೇಕು?

ಒಂದು ವೇಳೆ ಯಾರಾದರೂ ಈ ರೀತಿಯಲ್ಲಿ ಮೋಸ ಹೋದರೆ ಅಂದೇ ಸೈಬರ್ ಪೊರ್ಟಲ್ ಅಥವಾ ಸೈಬರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು.

67# ಗೆ ಡಯಲ್ ಮಾಡಿ ಮೊಬೈಲ್ ಸಂಖ್ಯೆ ಸುರಕ್ಷಿತಗೊಳಿಸಿ.

ಸೈಬರ್ ವಂಚನೆಗೆ ತುತ್ತಾದವರು ತಕ್ಷಣ ಕರೆ ಮಾಡಿ ದೂರು ಕೊಡಲು ನಂಬರ್ – 1930.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ