ಬಳ್ಳಾರಿ / ಕಂಪ್ಲಿ : ರಾಜ್ಯ ಸರ್ಕಾರವು ಶೇಕಡ 60ರಷ್ಟು ಕನ್ನಡ ಭಾಷೆ, ಶೇಕಡಾ 40 ರಷ್ಟು ಇತರ ಭಾಷೆಯಲ್ಲಿ ಇರಬೇಕು ಎಂಬ ಕಟ್ಟುನಿಟ್ಟಿನ ಆದೇಶವಿದ್ದರೂ,
ನಗರದಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಆಗ್ರಹಿಸಿ ಈ ಹಿಂದೆ ಕನ್ನಡ ಪರ ಸಂಘಟನೆಗಳು ಗಟ್ಟಿಯಾದ ಧ್ವನಿ ಹೆಚ್ಚಿದರೂ ಆದರೆ ನಗರದಲ್ಲಿನ ಹಲವು ಅಂಗಡಿ ಹೋಟೆಲ್ ಮಳಿಗೆ ವ್ಯಾಪಾರಿ ಸಂಸ್ಥೆಗಳ ಹಾಗೂ ಜಾಹೀರಾತು ಪ್ಲಾಕ್ಸ್ ಗಳಲ್ಲಿ ಸಂಪೂರ್ಣ ಇಂಗ್ಲಿಷಮಯವಾಗಿದೆ.
ಕನ್ನಡಪರ ಸಂಘಟನೆಗಳು ಪ್ರತಿಭಟನೆ ಎಚ್ಚರಿಕೆ ನೀಡಿದರೂ ಸಹ ಸ್ಥಳೀಯ ಆಡಳಿತ ಕ್ಯಾರೆ ಎನ್ನುತ್ತಿಲ್ಲ,
ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿ ಈ ಹಿಂದೆಯೂ ಕನ್ನಡಪರ ಸಂಘಟನೆಗಳ ಮುಖಂಡರು ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರೂ ಪರಿಸ್ಥಿತಿ ಕಿಂಚಿತ್ತೂ ಬದಲಾಗಿಲ್ಲ.
ಶಾಲಾ ಕಾಲೇಜುಗಳ ಜಾಹೀರಾತು ಫ್ಲೆಕ್ಸ್ ಗಳಲ್ಲಿ ಕನ್ನಡ ಭಾಷೆ ಇಲ್ಲವಾಗಿದ್ದು ಇಂಗ್ಲೀಷ್ ಭಾಷೆ ಭರಾಟೆ ಹೆಚ್ಚಿದೆ.
ನಗರದ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಹಾಗೂ ಡಾ. ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಇಂಗ್ಲಿಷಿನ ಬ್ಯಾನರ್ ಗಳ ಭರಾಟೆ ಹೆಚ್ಚಾಗಿದೆ.
ಇದಕ್ಕೆ ಪುರಸಭೆ ಆಡಳಿತ ಕಡಿವಾಣ ಹಾಕುತ್ತೋ, ಇಲ್ಲವೋ? ಕನ್ನಡಪರ ಸಂಘಟನೆಗಳು ಕಪ್ಪುಮಸಿಯನ್ನು ಬಳಿಯುತ್ತಾರೋ ಕಾದು ನೋಡೋಣ…
ವರದಿ : ಜಿಲಾನಸಾಬ್ ಬಡಿಗೇರ್
