ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್ ಭರ್ಮಣ್ಣ ರವರು ಮಾದ್ಯಮದವರೊಂದಿಗೆ ಮಾತನಾಡಿ ಕರ್ನಾಟಕ ರಾಜ್ಯಾದ್ಯಂತ ಮಳೆ ಅರಂಭವಾಗುತ್ತಿದ್ದು ರಾಜ್ಯದ ರೈತರು ಬಿತ್ತನೆ ಕಾರ್ಯ ಶುರು ಮಾಡುತ್ತಿದ್ದಾರೆ
ಆದರೆ ರೈತರಿಗೆ ಅವಶ್ಯಕವಾಗಿ ಬೇಕಾಗಿರುವ ಡಿ.ಎ.ಪಿ. ಯೂರಿಯಾ ಹಾಗೂ ಎಲ್ಲಾ ರೀತಿಯ ಗೊಬ್ಬರಗಳು ಮತ್ತು ಬಿತ್ತನೆ ಬೀಜಗಳು ಸಮರ್ಪಕವಾಗಿ ಸಿಗತ್ತಿಲ್ಲ ಗೊಬ್ಬರದ ಅಂಗಡಿಗಳಲ್ಲಿ ವಿಚಾರಿಸಿದರೆ ಗೊಬ್ಬರದ ಆಂಗಡಿ ಮಾಲೀಕರು ರೈತರಿಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಮತ್ತು ಬಿತ್ತನೆ ಬೀಜಗಳು ಸಿಗದೇ ಹೋದರೆ ರೈತರ ಸ್ಥಿತಿ ತುಂಬಾ ಚಿಂತಾಜನಕವಾಗುತ್ತದೆ, ಗುಣಮಟ್ಟದ ಬಿತ್ತನೆ ಬೀಜ ಮತ್ತು ಗೊಬ್ಬರಗಳನ್ನು ಸರಿಯಾದ ಸಮಯಕ್ಕೆ ಸಮರ್ಪಕವಾಗಿ ರೈತರಿಗೆ ಒದಗಿಸಲು ಗೊಬ್ಬರದ ಅಂಗಡಿ ಮಾಲೀಕರು ರಾಜ್ಯದ ರೈತರಿಗೆ ಬಿತ್ತನೆಗೆ ಬೇಕಾಗುವ ಬೀಜಗಳ ಮತ್ತು ಔಷಧ ಗೊಬ್ಬರಗಳ ಸರ್ಕಾರದ ನಿಗದಿತ ದರ ಪಟ್ಟಿ ಫಲಕವನ್ನು ತಮ್ಮ ತಮ್ಮ ಅಂಗಡಿ ಮುಂಭಾಗದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು, ರೈತರಿಗೆ ಬಿತ್ತನೆ ಬೀಜಗಳು ಹಾಗು ಗೊಬ್ಬರಗಳ ಮೇಲೆ ಸರ್ಕಾರ ನಿಗದಿತ ದರ ಮಾಡಿರುವ ಬೆಲೆಯಲ್ಲಿ ಮಾಲೀಕರು ಮಾರಾಟ ಮಾಡಬೇಕು ಎಂದು ಹೇಳಿದರು.
ಗೊಬ್ಬರದ ಅಂಗಡಿ ಮಾಲೀಕರು ರೈತರಿಗೆ ಕಳಪೆ ಬೀಜ, ಕಳಪೆ ಗೊಬ್ಬರ ಮಾರಾಟ ಮಾಡುವುದು ಕಂಡು ಬಂದಲ್ಲಿ ಹಾಗೂ ಗೊಬ್ಬರದ ಅಂಗಡಿ ಮಾಲೀಕರು ಸರ್ಕಾರದ ದರ ಫಲಕ ಅಳವಡಿಸಿಕೊಳ್ಳದಿದ್ದರೆ, ಅಂತಹ ಅಂಗಡಿಗಳ ಮೇಲೆ ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಗೊಬ್ಬರದ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.
- ಕರುನಾಡ ಕಂದ
