ನೆಲಮಂಗಲ/ಕಸಬಾ: ಹಾಲು ಉತ್ಪಾದಕರ ನಿರ್ದೇಶಕರ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ಭವಾನಿ ಶಂಕರ್ ಬೈರೇಗೌಡರು ನಾನು ಹೆಸರಿಗಾಗಿ ಬಂದಿಲ್ಲ ನನಗೆ ಈಗಾಗಲೇ ತಾಲ್ಲೂಕಿನಲ್ಲಿ ಹೆಸರಿದೆ ರೈತರುಗಳ ಹಿತ ಬಯಸಿ ಬಂದಿದ್ದೇನೆಂದು ಹೇಳಿದ ಬೈರೇಗೌಡರು ನಾನು ರೈತನಾಗಿದ್ದು ರೈತರುಗಳ ಸಮಸ್ಯೆಗಳನ್ನು ಅರಿತ್ತಿದ್ದೇನೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.
ನೆಲಮಂಗಲ ತಾಲ್ಲೂಕಿನಲ್ಲಿ ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಇದೇ ತಿಂಗಳು 25ರಂದು ಚುನಾವಣೆ ನಡೆಯಲಿದ್ದು ಹಾಲಿ ನಿರ್ದೇಶಕ ಭಾಸ್ಕರ್ ವಿರುದ್ದ ಇದೇ ತಾಲ್ಲೂಕಿನ ರೈತನಾದ ಭವಾನಿ ಶಂಕರ್ ಎಂದು ಹೆಸರು ಪಡೆದಿರುವ ಬೈರೇಗೌಡ ರವರು ಕುಕ್ಕರ್ ಚಿನ್ಹೆಯೊಂದಿಗೆ ಸ್ಪರ್ಧಿಸಿದ್ದಾರೆ. 184 ಮತಗಳಿರುವ ತಾಲ್ಲೂಕಿನಲ್ಲಿ 3 ಮತಗಳು ಅನರ್ಹವಾಗಿವೆ ಎಂದು ಮಾತನಾಡಿದ ಬೈರೇಗೌಡರವರು ನಾನು ಈಗಲೂ 40 ವಿವಿಧ ತಳಿಯ ಹಸುಗಳನ್ನು ಸಾಕುತ್ತಿದ್ದೇನೆ ದಿನಕ್ಕೆ ಸುಮಾರು 100ಕ್ಕೂ ಅಧಿಕ ಲೀಟರ್ ಹಾಲನ್ನು ಬಮೂಲ್ ಗೆ ನೀಡುತ್ತಿದ್ದೇನೆ ಆದರೆ ಹಿಂದಿನ ನಿರ್ದೆಶಕ ರೈತರುಗಳ ಹಿತ ಕಾಯದೆ ಕೋವಿಡ್ ಸಮಯದಲ್ಲಿ ರೈತರಿಂದ ಖರೀದಿ ಮಾಡಿದ್ದ ಉತ್ಪನ್ನಗಳ ಖರೀದಿ ಮಾಡಿ ಜನರಿಗೆ ಉಚಿತವಾಗಿ ಹಂಚಿದ್ದೇನೆಂದು ಸುಮಾರು 5 ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ 5 ವರ್ಷಗಳಲ್ಲಿ ತಾಲ್ಲೂಕಿನ ಬಮೂಲ್ ನಲ್ಲಿ ಹಗರಣಗಳು ಸಾಕಷ್ಟು ನಡೆದಿವೆ ಲಾಭದಲ್ಲಿದ್ದ ಬಮೂಲ್ ಈಗ ನಷ್ಟದಲ್ಲಿರುವುದು ನೋವಿನ ಸಂಗತಿಯಾಗಿದೆ ಎಂದರು. ನನ್ನ ಮೇಲೆ ಈಗಾಗಲೇ ಕುತಂತ್ರವೆಸಗಿ ಚುನಾವಣೆಯಲ್ಲಿ ಸ್ಪರ್ಧಿಸದ ಹಾಗೆ ಮಾಡಲಾಗಿತ್ತು ಆದರೆ ಸತ್ಯ ಮೇವ ಜಯತೆ ಎಂಬ ಹಾಗೆ ನನಗೆ ಜಯ ಸಿಕ್ಕಿದೆ ಎಂದು ಹೇಳುತ್ತಾ ಒಬ್ಬ ರೈತನ ಸಮಸ್ಯೆಗಳನ್ನು ಒಬ್ಬ ರೈತನಿಂದನೇ ಅರಿಯಲು ಸಾಧ್ಯವೆಂದರು.
ನನ್ನ ಹೋರಾಟ:
ಸರ್ಕಾರವು ಹಾಲಿನ ಮೇಲಿನ ದರವನ್ನು ಹೆಚ್ಚಿಗೆ ಮತ್ತು ಕಡಿಮೆ ಮಾಡುವುದರ ಅಧಿಕಾರವನ್ನು ನಮ್ಮ ಸಂಘಗಳ ಒಕ್ಕೂಟಕ್ಕೆ ನೀಡುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ, ಹಸುಗಳಿಗೆ ನುರಿತ ತಂತ್ರಜ್ಙಾವಿರುವ ಸೌಲಭ್ಯಗಳಿವೆ ರೈತರುಗಳಿಗೆ ಸಿಗುತ್ತಿಲ್ಲ ಇದರ ನಿಟ್ಟಿನಲ್ಲಿ ಮೊದಲ ಆದ್ಯತೆಯನ್ನು ಕೊಟ್ಟು ರೈತರುಗಳ ಹಿತಕಾಯುತ್ತೇನೆ ಎಂದರು.
- ಕರುನಾಡ ಕಂದ
