ಬೆಂಗಳೂರು : ಸರ್ಕಾರಿ ಸ್ವಾಮ್ಯದ ಉದ್ಯಮವಾಗಿ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಬಾಟಿಯಾ ಆಯ್ಕೆಯಾಗಿದ್ದಾರೆ.
ಆದರೆ ಆಯ್ಕೆ ಆಗಿರುವುದಕ್ಕೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೆ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ತಮನ್ನಾ ಆಯ್ಕೆಗೆ ಕಾರಣಗಳನ್ನು ನೀಡಿ ವಿವರಿಸಿದ್ದಾರೆ.
ಕನ್ನಡ ಚಲನಚಿತ್ರೋದ್ಯಮದ ಬಗ್ಗೆ ಕೆಎಸ್‌ಡಿಎಲ್‌ಗೆ ಆಳವಾದ ಗೌರವ ಮತ್ತು ಗೌರವವಿದೆ. ಕೆಲವು ಕನ್ನಡ ಚಲನಚಿತ್ರಗಳು ಬಾಲಿವುಡ್ ಚಲನಚಿತ್ರಗಳಿಗೂ ಸ್ಪರ್ಧೆಯನ್ನು ನೀಡುತ್ತಿವೆ. ಮೈಸೂರು ಸ್ಯಾಂಡಲ್ ಕರ್ನಾಟಕದೊಳಗೆ ಉತ್ತಮ ಬ್ರಾಂಡ್ ಮರುಸ್ಥಾಪನೆಯನ್ನು ಹೊಂದಿದೆ. ಇದನ್ನು ಬಲಪಡಿಸಲಾಗುವುದು. ಆದಾಗ್ಯೂ, ಮೈಸೂರು ಸ್ಯಾಂಡಲ್‌ನ ಉದ್ದೇಶವು ಕರ್ನಾಟಕದಾಚೆಗಿನ ಮಾರುಕಟ್ಟೆಗಳಲ್ಲಿ ಆಕ್ರಮಣಕಾರಿಯಾಗಿ ಸ್ಪರ್ಧೆ ನೀಡುವುದಾಗಿದೆ. ಕರ್ನಾಟಕದ ಹೆಮ್ಮೆಯೂ ರಾಷ್ಟ್ರದ ರತ್ನವಾಗಿದೆ. ಆದ್ದರಿಂದ ಇದು ವಿವಿಧ ಮಾರ್ಕೆಟಿಂಗ್ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಪಿಎಸ್‌ಯು ಮಂಡಳಿಯ ಸ್ವತಂತ್ರ ಕಾರ್ಯತಂತ್ರದ ನಿರ್ಧಾರವಾಗಿದೆ ” ಎಂದು ಎಂ.ಬಿ ಪಾಟೀಲ್ ತಮನ್ನಾ ಆಯ್ಕೆ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ರಾಯಭಾರಿಯಾಗಬೇಕು ಎಂದಾದರೆ, ನಟಿಯ ಲಭ್ಯತೆ, ಇತರೆ ಬ್ರ್ಯಾಂಡ್ ಜತೆಗಿನ ಒಪ್ಪಂದ, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಯೂಟ್ಯೂಬ್, ಟ್ವಿಟ್ಟರ್ ಇತ್ಯಾದಿಗಳಲ್ಲಿ ಎಷ್ಟು ಸಕ್ರಿಯರಾಗಿದ್ದಾರೆ? ಅವರ ಅನುಯಾಯಿಗಳ ಸಂಖ್ಯೆ, ಎಂಗೇಜ್‌ಮೆಂಟ್ ಪ್ರಮಾಣ, ವಿಷಯಗಳು, ವ್ಯಕ್ತಿತ್ವ, ಸಂವಹನ ಶೈಲಿ ಇವು ಎಲ್ಲವನ್ನೂ ಪರಿಗಣಿಸಲಾಗುತ್ತದೆ, ನಮ್ಮ ಉತ್ಪನ್ನದ ಮೌಲ್ಯಗಳು ಹಾಗೂ ಗುರಿ ಗ್ರಾಹಕರೊಂದಿಗೆ ಹೊಂದಿಕೊಳ್ಳುತ್ತದೆಯಾ ಬ್ರ್ಯಾಂಡ್‌ನ ಹೃದಯವಂತಿಕೆ ಅವರು ಪ್ರತಿಬಿಂಬಿಸಬೇಕಾಗುತ್ತದೆ. ಅವರ ಶ್ರೋತೃವರ್ಗ ನಮ್ಮ ಗುರಿ ಗ್ರಾಹಕರೊಂದಿಗೆ ತಾಳಮೇಳವಿದೆಯಾ? ಅವರ ಪ್ರಭಾವ ಎಷ್ಟು ವ್ಯಾಪಕವಾಗಿದೆ? ಅವರು ನಮ್ಮ ಮಾರಾಟದ ಗುರಿಗೆ ಸಹಾಯ ಮಾಡಬಲ್ಲವರಾ? ಎಂಬ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
