
ನರೇಗಾ, ಜಲ ಜೀವನ ಸೇರಿದಂತೆ ವಿವಿಧ ಕಾಮಗಾರಿಗಳ ಪರಿವೀಕ್ಷಣೆ.
ಯಾದಗಿರಿ/ಶಹಾಪೂರ: ತಾಲೂಕಿನ ರಸ್ತಾಪೂರ, ಸಗರ, ಹೊಸಕೇರಾ, ಗೋಗಿ.ಕೆ ಮತ್ತು ಚಾಮನಾಳ ಗ್ರಾಮ ಪಂಚಾಯತಗಳಿಗೆ ಶ್ರೀ ಲವೀಶ್ ಒರಡಿಯಾ ಭಾ.ಆ.ಸೇ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಯಾದಗಿರಿ ರವರು ಇಂದು ಭೇಟಿ ನೀಡಿ, ಪ್ರಗತಿಯಲ್ಲಿರುವ ನರೇಗಾ ಯೋಜನೆಯ ಕಾಮಗಾರಿ ಸ್ಥಳ, ಜಲ ಜೀವನ್ ಮಿಷನ್/ಕುಡಿಯುವ ನೀರಿನ ಸೌಲಭ್ಯ, ಸ್ವಚ್ಛ ಭಾರತ ಮಿಷನ್ ಯೋಜನೆಯ ಸ್ವಚ್ಛ ಸಂಕೀರ್ಣ ಘಟಕ, ಸಮುದಾಯ ಶೌಚಾಲಯ ಪ್ರಗತಿ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಕುರಿತು ವೀಕ್ಷಣೆ ಮಾಡಿ ಪರಿಶೀಲಿಸಿದರು.
ಈ ವೇಳೆ ಜಿ.ಪಂ.ಯ ಮಾನ್ಯ ಯೋಜನಾ ನಿರ್ದೇಶಕರಾದ ಶ್ರೀ ಸಿ.ಬಿ.ದೇವರಮನಿ, ಸಹಾಯಕ ಯೋಜನಾಧಿಕಾರಿ ಶ್ರೀ ಸಂತೋಷ ಶಹಾಪೂರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ, ಶ್ರೀ ಬಸವರಾಜ ಶರಭೈ ರವರು ಉಪಸ್ಥಿತರಿದ್ದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, RWS & KRIDL, ತಾ.ಪಂ.ಯ ಸಹಾಯಕ ನಿರ್ದೇಶಕರು (ಪ್ರ), ಸೇರಿದಂತೆ ಅನುಷ್ಠಾನ ಅಧಿಕಾರಿಗಳು, ಗ್ರಾಮ ಪಂಚಾಯತ ಅಧ್ಯಕ್ಷರು, ಪಿಡಿಒ, ನರೇಗಾ ಸಿಬ್ಬಂದಿ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















