೧. ಅಂದು-ಇಂದು.
ಅಂದಿನ ಕವಿಗಳ
ಕವನಗಳಲ್ಲಿ ಕಾಣುತ್ತಿತ್ತು,
ಮಣ್ಣಿನ ವಾಸನೆ,
ಇಂದಿನ ಕವಿಗಳ ಕವನಗಳಲ್ಲಿ?!
ಕಾಣುತ್ತಿದೆ ಬರೀ
ಹೆಣ್ಣಿನ ವಾಸನೆ!
೨. ಸಾಯುತಿದೆ ನುಡಿ.
ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಕ್ಕು ನಾವು
ಮಾಡುತ್ತಿದ್ದೇವೆ,
ನಾಡು ನುಡಿಗೆ ನೋವು,
ಅಂತೆಯೇ ಕನ್ನಡ ಭಾಷೆಗಿಲ್ಲಿ
ನಿತ್ಯವೂ ಸಾವು!
೩. ಕಟ್ಟೋಣ.
ಕಟ್ಟುವುದು ಬೇಡ ಅಲ್ಲಿ
ಮಸೀದಿ,ಮಂದಿರ,
ಕಟ್ಟೋಣ ನಾವಿಲ್ಲಿ
ಮನೋ ಮಂದಿರ,
ಆದೀತು ಆಗ
ಈ ಜಗ ಸುಂದರ!.
೪. ರಾಜಕಾರಣಿ.
ಬಣ್ಣ ಬಣ್ಣದ
ಮಾತುಗಳಾಡಿ
ಬಣ್ಣ ಬಯಲು
ಮಾಡಿ ಕೊಳ್ಳುವ
ಬಣ್ಣಗೇಡಿ ಮಂದಿ!
೫. ಹ(ಣ)ಗರಣ.
ಇದ್ದರೆ ಕೈ ತುಂಬ ಹಣ
ಮುಚ್ಚಿ ಹಾಕಬಹುದು,
ಸುಲಭವಾಗಿ,
ಮಾಡಿದ ಹಗರಣ!
- ಶಿವಪ್ರಸಾದ್ ಹಾದಿಮನಿ.
ಕೊಪ್ಪಳ.
