ಬಾಕಿ ಬೆಳೆ ವಿಮೆ ಪರಿಹಾರ ಹಣ ಕೂಡಲೇ ವಿಳಂಬದ ಬಡ್ಡಿಯೊಂದಿಗೆ ರೈತರ ಖಾತೆಗೆ ಜಮಾ ಮಾಡುವಂತೆ ಬಸವರಾಜ ಹಡಪದ ಸುಗೂರ ಎನ್. ಆಗ್ರಹ
ಕಲಬುರಗಿ: ಜಿಲ್ಲೆಯಲ್ಲಿ 2024 -25 ನೇ ಸಾಲಿನಲ್ಲಿ ಸಹಸ್ರಾರು ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ತೊಗರಿ ಹಾಗೂ ಇನ್ನಿತರೆ ನೊಂದಾಯಿತ ಬೆಳೆಗಳಾದ ಉದ್ದು, ಹೆಸರು, ಸೋಯಾಬಿನ್, ಹತ್ತಿ ಇತ್ಯಾದಿ ಬೆಳೆದ ಬೆಳೆಗಳನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಇಪ್ಕೂ ಟೊಕಿಯೊ ಜನರಲ್ ಇನ್ಸೂರೆನ್ಸ್ ಕಂಪನಿಗೆ ಬೆಳೆ ವಿಮೆ ಕಂತು ಪಾವತಿಸಿ ವಿಮೆ ಮಾಡಿಸಿದ್ದು ತದನಂತರ ಸದರಿ ಕಂಪನಿಯವರು ಸಂಬಂಧಪಟ್ಟ ರೈತರಿಗೆ ವಿಮಾ ಪರಿಹಾರ ಸಂಬಂದಿಸಿದಂತೆ ಬೆಳೆ ವಿಮಾ ಪಾಲಿಸಿ ಸಂರಕ್ಷಣಾ ಯಾಪ್ ಮೂಲಕ ನೀಡಿದ್ದು ಇರುತ್ತದೆ, ಆದರೆ 2024-25 ನೇ ಸಾಲಿನಲ್ಲಿ ಅತಿವೃಷ್ಟಿ-ಅನಾವೃಷ್ಟಿ ಸೇರಿದಂತೆ ನೆಟ್ಟಿರೋಗಕ್ಕೆ ತುತ್ತಾಗಿ ಸಾವಿರಾರು ಎಕರೆಯಲ್ಲಿ ಬೆಳೆದ ತೊಗರಿ ಬೆಳೆ ಹಾಗೂ ಇನ್ನಿತರ ಬೆಳೆಗಳು ಹಾನಿಯಾಗಿ ಬೆಳೆ ವಿಮೆ ಮಾಡಿಸಿದ ರೈತರು ತುಂಬಾ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದು ತದ ನಂತರ ಸದರಿ ವಿಮಾ ಕಂಪನಿ ಬೆಳೆ ಕಟಾವು ಪರೀಕ್ಷೆ ನಡೆಸಿ ವಿಮೆ ಮಾಡಿಸಿದ ಬೆಳೆಗಳ ಹಾನಿಗೆ ಸಂರಕ್ಷಣಾ ಯಾಪ್ ನಲ್ಲಿ ಪರಿಹಾರದ ಪ್ರಮಾಣ ನಮೂದಿಸಿದ್ದು ಆದಷ್ಟು ಬೇಗ ನೊಂದ ಬೆಳೆ ವಿಮೆ ಮಾಡಿದ ರೈತರ ಖಾತೆಗೆ ಪರಿಹಾರ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು, ಆದರೆ ಸದರಿ ವಿಮಾ ಕಂಪನಿ ಜನವರಿ 2025 ರಲ್ಲಿ ಮಧ್ಯಂತರ ಪರಿಹಾರವಾಗಿ ಅಲ್ಪಸ್ವಲ್ಪ ಪರಿಹಾರ ರೈತರ ಖಾತೆಗೆ ಜಮಾ ಮಾಡಿದ್ದು ಇದು ಸದರಿ ಕಂಪನಿಯಿಂದ ಕಣ್ಣೊರಿಸುವ ತಂತ್ರವಾಗಿದೆ.
ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ ನಿಯಮಗಳ ಅನುಸಾರ ಬೆಳೆ ವಿಮಾ ಪರಿಹಾರ ಘೋಷಣೆ ಮಾಡಿ ಒಂದು ತಿಂಗಳ ಒಳಗೆ ಸಂಬಂಧ ಪಟ್ಟ ರೈತರ ಖಾತೆಗೆ ಸಂಪೂರ್ಣ ಪರಿಹಾರ ಹಣ ಯಾವುದೆ ವಿಳಂಬ ಮಾಡದೇ ಜಮಾ ಮಾಡಬೇಕು, ಆದರೆ ನಮ್ಮ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಬೆಳೆ ವಿಮಾ ಯೋಜನೆ ಅನುಷ್ಠಾನ ಮಾಡಬೇಕಾಗಿರುವ ಇಪ್ಕೊ ಟೊಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ ಅನಗತ್ಯವಾಗಿ ನೊಂದ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಹಣ ಸಂಪೂರ್ಣವಾಗಿ ಜಮಾ ಮಾಡದೆ ವಿಳಂಬ ಮಾಡ್ತಾ ಇರೋದು ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಾಪಾಡಲು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆ ಪ್ರಧಾನ ಮಂತ್ರಿ ಫಸಲ ಬಿಮಾ ಬೆಳೆ ವಿಮಾ ಯೋಜನೆಯ ಧ್ಯೇಯ ಉದ್ದೇಶಗಳ ವಿರುದ್ಧ ಸದರಿ ಕಂಪನಿ ನಡೆದುಕೊಂಡಿರುವುದು ಸ್ಪಷ್ಟವಾಗಿ ತೋರುತ್ತದೆ, ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿಸಿಕೊಳ್ಳ ಬೇಕಾಗಿದ್ದು ರೈತರಿಗೆ ಕೃಷಿ ಚಟುವಟಿಕೆ ಮಾಡಲು ಬೀಜ, ಗೊಬ್ಬರ ಇನ್ನಿತರ ಅಗತ್ಯ ಕೃಷಿ ಸಾಮಗ್ರಿಗಳ ಖರೀದಿಗೆ ಹಣದ ಅವಶ್ಯಕತೆ ತುಂಬಾ ಇದ್ದು ಸುಮಾರು 3-4 ತಿಂಗಳಿಂದ ತಮಗೆ ಬರಬೇಕಾಗಿರುವ ಬಾಕಿ ಬೆಳೆ ವಿಮೆ ಪರಿಹಾರ ಪಡೆಯಲು ರೈತರು ಕಾಯುತ್ತಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಜಿಲ್ಲೆಯ ಸಹಸ್ರಾರು ರೈತರಿಗೆ ಬರಬೇಕಾಗಿರುವ ಬಾಕಿ ಇರುವ ಬೆಳೆ ವಿಮಾ ಪರಿಹಾರ ಹಣವನ್ನು ಒಂದು ವಾರದೊಳಗೆ ಶೇಕಡಾ 12% ಪ್ರತಿಶತ ವಿಳಂಬದ ಬಡ್ಡಿಯೊಂದಿಗೆ ರೈತರಿಗೆ ನೀಡುವಂತೆ ಇಪ್ಕೋ ಟೊಕಿಯೋ ಜನರಲ್ ಇನ್ಸೂರೆನ್ಸ ಕಂಪನಿಗೆ ಕಟ್ಟು ನಿಟ್ಟಾಗಿ ಸೂಚಿಸಬೇಕು ಹಾಗೂ ಸದರಿ ಪರಿಹಾರ ಹಣ ವಿತರಿಸುವರೆಗೆ ಈ ವಿಮಾ ಕಂಪನಿಗೆ 2025 – 26 ನೆ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ ವಿಮಾ ಯೋಜನೆ ಅನುಷ್ಟಾನಗೊಳಿಸಲು ಯಾವುದೇ ಟೆಂಡರ ನೀಡಿದಂತೆ ಸೂಕ್ತ ಕ್ರಮ ವಹಿಸಿ ಜಿಲ್ಲೆಯ ನೊಂದ ಸಹಸ್ರಾರು ಬೆಳೆ ವಿಮಾ ಮಾಡಿಸಿದ ರೈತರ ಹಿತ ಕಾಪಾಡಬೇಕಾಗಿ ಸಮಾಜದ ಹೋರಾಟಗಾರರಾದ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರ್ಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್ ಅವರು ಜಿಲ್ಲಾಧಿಕಾರಿಗಳಿಗೆ ಈ ಪತ್ರಿಕೆಯ ಮೂಲಕ ಮನವಿ ಸಲ್ಲಿಸಿದ್ದಾರೆ.
- ಕರುನಾಡ ಕಂದ



















