ಆಶ್ರಯ ನಿವೇಶನ ಹಂಚಿಕೆಯಲ್ಲಿ ಹಣ ನೀಡಿದವರಿಗೆ ಗ್ರಾಮ ಪಂಚಾಯತ ಪಿಡಿಓ ಮತ್ತು ಹನುಮಂತಗೌಡ ಚಂಡೂರ ಆಶ್ರಯ ಮನೆ ಹಂಚಿಕೆ ಆರೋಪ ನಿಂಗಪ್ಪ ಕುರಿ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚಂಡೂರು ಗ್ರಾಮದ ನಿವೇಶನ ಹಂಚಿಕೆಯಲ್ಲಿ ಗ್ರಾಮ ಪಂಚಾಯತ್ ಪಿ ಡಿ ಓ ಮತ್ತು ಗ್ರಾಮದ ಮುಖಂಡ ಹನುಮಂತಗೌಡ ಚಂಡೂರ ಅವರು ಹಣ ನೀಡಿದವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಅವರು ಕುಕನೂರು ತಾಲೂಕಿನ ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಡೂರು ಗ್ರಾಮಸ್ಥರಿಗೆ ಆಶ್ರಯ ನಿವೇಶನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಗ್ರಾಮ ಪಂಚಾಯಿತಿ ಕೆಲವೊಂದಿಷ್ಟು ಸದಸ್ಯರ ಗಮನಕ್ಕೂ ಬಾರದಂತೆ ನಿವೇಶನ ಹಂಚಿದ್ದು ಮಾಹಿತಿ ಕೇಳಲು ಹೋದರೆ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಅಧ್ಯಕ್ಷರನ್ನು ಪ್ರಶ್ನಿಸಿದರೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಮೇಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ನೋಡಿದರೆ ತುಂಬಾ ಬೇಸರವೆನಿಸುತ್ತದೆ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಇಂತಹ ತಾರತಮ್ಯ ಅನುಸರಿಸುತ್ತಿರುವ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡಬೇಕೆಂದು ಮಾತನಾಡಿದರು.
ಶಿರೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೆ ಮನಸೋ ಇಚ್ಛೆ ಆಯ್ಕೆ ಮಾಡಿ ಆಶ್ರಯ ನಿವೇಶನ ಹಂಚಿಕೆ ಮಾಡಿರುವುದನ್ನು ಜಿಲ್ಲಾ ಕ. ರ. ವೇ ಅಧ್ಯಕ್ಷರಾದ ಬಿ ಗಿರೀಶ ನಂದ ಖಂಡಿಸಿದರು.
ಮತ್ತೊಮ್ಮೆ ಗ್ರಾಮಸಭೆ ಆಯೋಜನೆ ಮಾಡಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಶಾಸಕರು ಇತ್ತ ಕಡೆ ಗಮನಹರಿಸಿ ಸರಿಯಾದ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಚಂಡೂರು ಗ್ರಾಮವಾಸಿಯಾದ ದ್ಯಾಮವ್ವ ಹಂದ್ರಾಳ ಎಂಬ ಮಹಿಳೆ ಶಿರೂರು ಗ್ರಾಮ ಪಂಚಾಯತ ಅಧ್ಯಕ್ಷ ಮಲ್ಲವ್ವ ಜ್ಯೋತಿ ಎನ್ನುವರಿಗೆ ನಿವೇಶನ ನೀಡಲು 20 ಸಾವಿರ ಹಣವನ್ನು ನೀಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಮುಂದಾದರೂ ಸುದ್ದಿ ವೀಕ್ಷಿಸಿದ ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಚೆಂಡೂರು ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡುವರು ಇಲ್ಲವೋ ?
ಈ ಸಂದರ್ಭದಲ್ಲಿ ಲಕ್ಷ್ಮವ್ವ ಕುರಿ, ರವೀಂದ್ರ ಗೌಡ ಪಾಟೀಲ್, ಶರಣಪ್ಪ ಅರಕೇರಿ, ಬಸಯ್ಯ ಸಂಕಿನ, ಹನುಮಪ್ಪ ಜ್ಯೋತಿ, ದ್ಯಾಮವ್ವ ಹಂದ್ರಾಳ, ಮುತ್ತವ್ವ ತಳಬಾಳ, ಮುದಿಯಪ್ಪ ತಳವಾರ, ಮಾರುತೆಪ್ಪ ತಳವಾರ, ಪ್ರಕಾಶ ಸಂಕಿನ, ಸುಭಾಸ ಜ್ಯೋತಿ, ಶಿವಲಿಂಗಯ್ಯ ಸಂಕಿನ, ಇತರರು ಇದ್ದರು.
- ಕರುನಾಡ ಕಂದ
