ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮುಂಗಾರು ಮಳೆ ಅತೀ ಬೇಗ ಶುರುವಾಗಿದೆ ಮಳೆಯಿಂದ ಖುಷಿಯಾಗಿರುವ ಹಲವು ರೈತರ ಮುಖದಲ್ಲಿ ಮಂದಹಾಸ ಮೂಡಿ ಭೂಮಿಯನ್ನು ಕೆಲ ರೈತರು ಹದಗೊಳಿಸುತ್ತಿದ್ದಾರೆ.
ಇನ್ನೂ ಕೆಲವು ರೈತರು ಕೃಷಿ ಚಟುವಟಿಕೆಗಳಲ್ಲಿ ತೀವ್ರವಾಗಿ ರೈತರು ಜಮೀನಿಗಳಲ್ಲಿ ಬಿತ್ತನೆಗಳು ಪ್ರಾರಂಭವಾಗಿದ್ದು , ಹಿಂದಿನ ವರ್ಷ ರೈತರು ಲಕ್ಷ್ಮಿಸೀಡ್ಸ್ ಕಂಪನಿಯ ಮೆಕ್ಕೆಜೋಳ ಬೀಜ ಬಿತ್ತಿ ತಾಲೂಕಿನ ಬಹಳ ಜನ ರೈತರು 1 ಎಕರೆಗೆ ಅಂದಾಜು 35-38 ಕ್ವಿಂಟಾಲ್ ಬೆಳೆದಿದ್ದಾರೆ ,
ಈ ಉತ್ತಮವಾಗಿ ಇಳುವರಿ ಬೆಳೆದ ಕಾರಣ ಈ ವರ್ಷ ಮುಂಗಾರು ಮಳೆ ಅರಂಭವಾಗುತ್ತಿದ್ದಂತೆ
ಕೊಟ್ಟೂರಿನ ಸುತ್ತ ಮುತ್ತಲಿನ ರೈತರು ಲಕ್ಷ್ಮಿ 405 ಮೆಕ್ಕೆಜೋಳ ಬೀಜ ಬಿತ್ತನೆಗಾಗಿ ರೈತರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.
ಕೊಟ್ಟೂರು ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮವಾಗಿ ಇಳುವರಿ ಕೊಡುವ ಬಿತ್ತನೆ ಮೆಕ್ಕೆ ಜೋಳ ಬೀಜ ಎಂದರೆ ಈ ಕಂಪನಿಯ ಒಳ್ಳೆಯ ಬಿತ್ತನೆ ಬೀಜ ಹಾಗಾಗಿ ನಾವು ಬಿತ್ತನೆಗಾಗಿ ಈ ಕಂಪನಿಯ ಬೀಜವನ್ನು ಖರೀದಿಸಿದ್ದೇವೆ ಎಂದು ರೈತರಾದ ಕೆ ಬಸವರಾಜ, ಜಿ, ಕರಿಬಸವನಗೌಡ, ಡಿ ಜಿ ಶರಣಪ್ಪ, ಬಿ ಮಂಜುನಾಥ, ಯುವರಾಜ ಗೊಲ್ಲರಹಳ್ಳಿ ರವರು ಮಾತನಾಡಿ ತಾಲೂಕಿನ ರೈತರು ಲಕ್ಷ್ಮಿ ಸೀಡ್ಸ್ ಕಂಪನಿಯ ಮೆಕ್ಕೆಜೋಳ ಬೀಜವನ್ನು ಬಿತ್ತನೆ ಮಾಡಿ ಒಳ್ಳೆ ಇಳುವರಿ ಪಡೆಯರಿ ಎಂದು ಅವರ ಅಭಿಪ್ರಾಯವನ್ನು ಪತ್ರಿಕೆಗೆ ತಿಳಿಸಿದರು.
