ಬೆಂಗಳೂರು: ಎಂಜಿನಿಯರಿಂಗ್ ಮತ್ತು ಉತ್ಪಾದನೆ ಕುರಿತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಬೆಂಗಳೂರು ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಇದರ ಆಶ್ರಯದಲ್ಲಿ ದಿ. ಶುಕ್ರವಾರ, 30 ಮೇ 2025 ರಂದು ಸಮಯ: ಬೆಳಿಗ್ಗೆ 10.30 ಕ್ಕೆ ತ್ರಿಪುರ ವಾಸಿನಿ, ಪ್ಯಾಲೇಸ್ ಮೈದಾನ, ಬೆಂಗಳೂರು ಇಲ್ಲಿ ಎಂ ಎಸ್ ಎಂ ಇ ಸಮಾವೇಶವು ಜರುಗುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು
ಶ್ರೀ ಡಿ ಕೆ ಶಿವಕುಮಾರ್ ಮಾನ್ಯ ಉಪ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ ಇವರು ನಡೆಸುವರು.
ಮುಖ್ಯ ಅತಿಥಿಗಳಾಗಿ ಕುಮಾರಿ ಶೋಭಾ ಕರಂದ್ಲಾಜೆ,
ಗೌರವಾನ್ವಿತ ಕೇಂದ್ರ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಕಾರ್ಮಿಕ ಮತ್ತು ಉದ್ಯೋಗದ ರಾಜ್ಯ ಸಚಿವರು ಇವರು ಆಗಮಿಸುವರು.
ಶ್ರೀ ಎಂ ಬಿ ಪಾಟೀಲ್, ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಮತ್ತು ಐಎಚ್‌ಫ್ರಾಸ್ಟ್ರಕ್ಚರ್ ಅಭಿವೃದ್ಧಿ, ಸಚಿವರು, ಕರ್ನಾಟಕ ಸರಕಾರ,
ಶ್ರೀ ಟಿ ರಘು ಮೂರ್ತಿ ಶಾಸಕಾಂಗ ಸಭೆಯ ಗೌರವ ಸದಸ್ಯರು, ಚಳ್ಳಕೆರೆ ಕ್ಷೇತ್ರ ಮತ್ತು ಅಧ್ಯಕ್ಷರು, ಕೆಎಸ್‌ಎಸ್‌ಐಡಿಸಿ, ಶ್ರೀ ಶರಣಬಸಪ್ಪ ದರ್ಶಾನಾಪುರ
ಸಣ್ಣ ಪ್ರಮಾಣದ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳು, ಕರ್ನಾಟಕ ಸರಕಾರ, ಡಾ. ಅಶ್ವಥನಾರಾಯಣ ಸಿ ಎನ್, ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ಶಾಸಕ, ಮಲ್ಲೇಶ್ವರಂ ಕ್ಷೇತ್ರ ಇವರುಗಳು ವಿಶೇಷ ಅತಿಥಿಗಳಾಗಿ ಉಪಸ್ಥಿತರಿರುವರು.
ಶ್ರೀ ಎಂ ಜಿ ಬಾಲಕೃಷ್ಣ ಅಧ್ಯಕ್ಷ, ಎಫ್‌ಕೆಸಿಸಿಎಲ್, ಡಾ. ಶಾಲಿನಿ ರಜನೀಶ್, ಕರ್ನಾಟಕ ಸರಕಾರದ
ಮುಖ್ಯ ಕಾರ್ಯದರ್ಶಿ ಮತ್ತು ಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಮಹಾಮಂಡಳ ಹಾಗೂ ಎಫ್ ಕೆ ಸಿ ಸಿ ಐ ನಿರ್ದೇಶಕಿ ಡಾ. ಮಧುರಾಣಿ ಗೌಡ ಇವರುಗಳು ಕಾರ್ಯಕ್ರಮಕ್ಕೆ ಸರ್ವರನ್ನೂ ಆಹ್ವಾನಿಸಿದ್ದಾರೆ.
ಗಾಲಾ ಪ್ರಶಸ್ತಿ ಕಾರ್ಯಕ್ರಮವು
ದಿನಾಂಕ: ಶನಿವಾರ, 31 ಮೇ 2025ರಂದು ತ್ರಿಪುರ ವಾಸಿನಿ, ಅರಮನೆ ಮೈದಾನ, ಬೆಂಗಳೂರು ಇಲ್ಲಿ
ಶ್ರೀ ವಿ ಸೋಮಣ್ಣ, ಮಾನ್ಯ ಕೇಂದ್ರ ರಾಜ್ಯ ಸಚಿವ ಜಲ ಶಕ್ತಿ ಮತ್ತು ರೈಲ್ವೆ, ಭಾರತ ಸರಕಾರ ಹಾಗೂ ಡಾ.ಜಿ.ಪರಮೇಶ್ವರ, ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ ಇವರುಗಳ ಗೌರವ ಉಪಸ್ಥಿತಿಯಲ್ಲಿ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
