ನೆಲಮಂಗಲ/ಕಸಬಾ : ಬೆಂಗಳೂರು ಹಾಲು ಒಕ್ಕೂಟ ನಿಯಮಿತದ ಚುನಾವಣೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗೆ ಸ್ಪರ್ಧಿಸಿದ್ದ ಬೈರೇಗೌಡ (ಭವಾನಿಶಂಕರ್) ರವರು ಅವರ ಪ್ರತಿ ಸ್ಪರ್ಧಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಭಾಸ್ಕರ್ ಅವರನ್ನು 29 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ
ಚುನಾವಣಾ ದಿನಾಂಕ ಪ್ರಕಟವಾದ ದಿನದಿಂದ ತಾಲ್ಲೂಕಿನಲ್ಲಿ ಆರೋಪ ಪ್ರತ್ಯಾರೋಪಗಳ ನಡುವೆ ನೆಡೆದ ಜಿದ್ದಾಜಿದ್ದಿಯ ಚುನಾವಣೆ ಬಹಳ ಕುತೂಹಲದ ಕಣವಾಗಿ ಬದಲಾಗಿತ್ತು, ಈ ಮದ್ಯೆ ನಿನ್ನೆ ತಡರಾತ್ರಿ ದಾಬಸ್ ಪೇಟೆ ಆರಕ್ಷಕ ಸಿಬ್ಬಂದಿಗಳು ದೇವರಹೊಸಹಳ್ಳಿ ಗ್ರಾಮದ ಹಾಲಿನ ಡೈರಿ ಅಧ್ಯಕ್ಷ ಶಂಕರ್ ರಾಜು ಅವರನ್ನು ನೆಲಮಂಗಲ ತಾಲ್ಲೂಕು ಭಾ.ಜಾ.ಪ ಅಧ್ಯಕ್ಷ ಜಗದೀಶ್ ಚೌದರಿ ಅಪಹರಿಸಿದ್ದಾರೆ ಎಂಬ ದೂರಿನನ್ವಯ ಎಫ್.ಐ.ಆರ್ ದಾಖಲಿಸಿ ರಾತ್ರಿ 8:00 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಬಂಧಿಸಿ ದಾಬಸ್ ಪೇಟೆ ಠಾಣೆಗೆ ಕರೆದುಕೊಂಡು ಬಂದಿದ್ದು ಇನ್ನು ಬಂಧಿಸಿದ ವೇಳೆ ಡೈರಿ ಅಧ್ಯಕ್ಷ ಶಂಕರ್ ರಾಜು ಅವರನ್ನು ಸಹ ಕರೆದುಕೊಂಡು ಬಂದಿರುತ್ತಾರೆ ತಕ್ಷಣವೇ ವಿಚಾರ ತಿಳಿದ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ನೆಲಮಂಗಲ ಮಾಜಿ ಶಾಸಕ ಡಾ. ಶ್ರೀನಿವಾಸ್ ಮೂರ್ತಿ ಹಾಗೂ ಸಪ್ರಗಿರಿ ಮೇಘವತ್ ಶಂಕರ್ ನಾಯಕ್ ಹಾಗೂ ಜಗದೀಶ್ ಚೌದರಿ ಅಪಾರ ಬೆಂಬಲಿತ ಅಭಿಮಾನಿಗಳು ಠಾಣೆಯ ಬಳಿ ಜಮಾಯಿಸಿದರು ಈ ನಡುವೆ ದೇವರಹೊಸಹಳ್ಳಿ ಗ್ರಾಮದ ಹಾಲಿನ ಡೈರಿ ಅಧ್ಯಕ್ಷ ಶಂಕರ್ ರಾಜು ತಾನು ಸಂಭಂದಿಕರ ಮನೆಯ ಕಾರ್ಯಕ್ರಮವೊಂದಕ್ಕೆ ತೆರಳಿ ನಂತರ ಚುನಾವಣೆ ಇದ್ದ ಕಾರಣ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾಗಿ ಹೇಳಿಕೆ ನೀಡಿದ ನಂತರ ತಡರಾತ್ರಿ 3:00 ಗಂಟೆ ಸುಮಾರಿಗೆ ಬಿಡುಗಡೆಗೊಳಿಸಿ ಹೈಡ್ರಾಮಾಗೆ ತೆರೆ ಎಳೆದರು, ಇದೀಗ ಚುನಾವಣಾ ಫಲಿತಾಂಶದಲ್ಲಿ ಬಿ.ಜೆ.ಪಿ ಹಾಗೂ ಜೆ.ಡಿ.ಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬೈರೇಗೌಡ ತಮ್ಮ ಪ್ರತಿಸ್ಪರ್ಧಿ ಭಾಸ್ಕರ್ ಅವರು ತಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಗಳಿಗೆ ಜನಾವಣೆಯಲ್ಲಿ ಸೋಲಿನ ರುಚಿಯ ಉತ್ತರ ಕೊಡುವ ಮೂಲಕ ಭರ್ಜರಿಯಾಗಿ ಜಯಶೀಲರಾಗಿದ್ದಾರೆ ಸುದ್ದಿ ತಿಳಿದ ನಂತರ ತಾಲ್ಲೂಕಿನ ಮುಖಂಡರುಗಳು ಬೈರೇಗೌಡರಿಗೆ ಶುಭಕೋರಿದ್ದು,
ಈ ಕುರಿತು ಮಾತನಾಡಿದ ಬೈರೇಗೌಡರು ಸತ್ಯಮೇವ ಜಯತೆ ಎಂಬ ಮಾತು ಇಂದು ನಿಜವಾಗಿದೆ ಈ ಗೆಲುವು ನನ್ನದಲ್ಲ ನನಗೆ ಮತ ನೀಡಿದ ಪ್ರತಿಯೋಬ್ಬರ ಗೆಲುವು ಎಂದು ತಿಳಿಸಿ ನನ್ನ ಮೇಲೆ ಮಾಡಿರುವ ಆರೋಪಗಳಿಗೆ ಇಂದು ಮತದಾರ ಬಂಧುಗಳು ನನ್ನ ಪರವಾಗಿ ಮತ ಹಾಕಿ ನನ್ನನ್ನು ಜಯಶೀಲನನ್ನಾಗಿ ಮಾಡುವ ಮೂಲಕ ಎಲ್ಲಾ ಆರೋಪಗಳು ಸುಳ್ಳೆಂದು ನಿರೂಪಿಸಿದ್ದಾರೆ ನನ್ನ ಕೊನೆಯ ಉಸಿರಿರುವ ವರೆಗೂ ರೈತರ ಉದ್ದಾರಕ್ಕಾಗಿ ಶ್ರಮಿಸುತ್ತೇನೆ ಹಾಗೂ ಹೈನುಗಾರಿಕೆಗೆ ಹೈಟೆಕ್ ಸ್ಪರ್ಶ ನೀಡುವ ನಿಟ್ಟಿನಲ್ಲಿ ತಾಲ್ಲೂಕಿನ ಹಾಲು ಉತ್ಪಾದಕರ ಸಂಘವನ್ನು ಇನ್ನಷ್ಟು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
- ಕರುನಾಡ ಕಂದ
