ಬೆಂಗಳೂರು : ರೌಡಿ ಶೀಟರ್ ಎನ್ನುವುದು ಇತಿಹಾಸದ ಹಾಳೆಯಲ್ಲಿ ನೋಂದಾಯಿಸಲ್ಪಟ್ಟಿರುವ ಜನರನ್ನು ಉಲ್ಲೇಖಿಸುವ ವಿಶಾಲವಾದ ಪದವಾಗಿದೆ, ಇದರಲ್ಲಿ ಅಪರಾಧ ಚಟುವಟಿಕೆಗಳ ಇತಿಹಾಸವನ್ನು ಹೊಂದಿರುವವರು ಅಥವಾ ಸಮಾಜಕ್ಕೆ ಬೆದರಿಕೆ ಎಂದು ಪರಿಗಣಿಸುವ ಜನರನ್ನು ಒಳಗೊಂಡಿರುತ್ತದೆ.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸದಸ್ಯ ಮೋಹನ್ ಕುಮಾರ್ ದಾನಪ್ಪ ಮಾತನಾಡಿ ರೌಡಿ ಶೀಟ್ ತೆರೆಯಲು ಮತ್ತು ಮುಂದುವರೆಸಲು ಮಾನ್ಯ ಉಚ್ಛ ನ್ಯಾಯಾಲಯದ ಪ್ರಕರಣ ಸಂಖ್ಯೆ: WP/4504/2021 (GM-Police) ರಲ್ಲಿ ನೀಡಿದ್ದ ಮಾರ್ಗಸೂಚಿಗಳನ್ನು ಪಾಲಿಸದೆ ಮುಂದುವರೆಸಿದ್ದರ ಮತ್ತು ಅಧಿಕಾರ ದುರ್ಬಳಕೆ ಮಾಡಿ ಅನಗತ್ಯ ರೌಡಿ ಶೀಟ್ ತೆರೆದಿದ್ದರ ವಿರುದ್ಧ ಪ್ರಾಧಿಕಾರದ ಕಚೇರಿಗೆ ಸಲ್ಲಿಸಿದ್ದ ದೂರುಗಳನ್ನು ವಿಚಾರಣೆ ನಡೆಸಿ ದೂರು ಸಲ್ಲಿಸಿದ್ದ ವ್ಯಕ್ತಿಗಳನ್ನು ರೌಡಿ ಶೀಟ್ ಪಟ್ಟಿಯಿಂದ ತೆಗೆಯುವಂತೆ/ಕೈಬಿಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ಆದೇಶಿಸಿರುತ್ತದೆ, ಮತ್ತು ಈಗಾಗಲೇ ಹಲವು ರೌಡಿ ಶೀಟ್ ಪ್ರಕರಣಗಳು ಸದರಿ ಪ್ರಾಧಿಕಾರದಲ್ಲಿ ವಿಚಾರಣೆಯಲ್ಲಿರುತ್ತವೆ.
ಆದ್ದರಿಂದ ಹಲವಾರು ವರ್ಷಗಳಿಂದ ಮತ್ತು ಅನಗತ್ಯ, ದುರುದ್ದೇಶದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಥವಾ ಇನ್ಯಾವುದೇ ಕಾರಣಗಳಿಂದ ಮಾನ್ಯ ಉಚ್ಛ ನ್ಯಾಯಾಲಯದ ಮಾರ್ಗಸೂಚಿಗಳನ್ನು ಪಾಲಿಸದೆ ವ್ಯಕ್ತಿಗಳ ವಿರುದ್ಧ ರೌಡಿ ಶೀಟ್ ತೆರೆದಿದ್ದಲ್ಲಿ, ಮುಂದುವರೆಸಿದ್ದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
