ದೇಶದೊಳಗಡೆ ದೀಪಾವಳಿ
ಬೆಳಕಿನ ಹಬ್ಬದ ಸಂತೋಷ ಬಾಳಲಿ
ಹೊಸ ಬಟ್ಟೆ ಸಿಹಿ ತಿನಿಸುಗಳಲ್ಲಿ
ಗಡಿಯಲ್ಲಿ ಕಾಯುವ ದೀಪವಿಲ್ಲದ ಸಿಹಿ ಇಲ್ಲದ ಹೊಸ ಬಟ್ಟೆ ಇಲ್ಲದ ಕಷ್ಟದಲ್ಲೂ ನಗುನಗುತ್ತಾ
ಭಾರತಾಂಬೆಗೆ ದೀಪ ಬೆಳಗುವ ವೀರಯೋಧರೆ ನಿಮಗೊಂದು ನನ್ನ ಸಲಾಂ
ನಮ್ಮ ನೆಮ್ಮದಿಯ ನಿದ್ದೆಗಾಗಿ
ನಿಮ್ಮ ಜೀವನ ಜೀವಾ ಮುಡುಪಾಗಿಟ್ಟು ನಮಗಾಗಿ
ನಮ್ಮ ಖುಷಿ ಸಂತೋಷಕ್ಕೆ ಕಾರಣವಾಗಿ
ನಮ್ಮ ಆಯುಷ್ಯದ ರೂವಾರಿಗಳಾಗಿ
ವೀರ ಯೋಧರೆ
ನಿಮಗೆ ನಿಮ್ಮ ಕುಟುಂಬಕ್ಕೊಂದು
ನನ್ನ ಸಲಾಂ
ಪಾಕಿಸ್ತಾನದ ಸ್ವಾರ್ಥಿಗಳು ಭಾರತಾಂಬೆಯ
ಒಡಲಿಗೆ ಕಿಚ್ಚಚ್ಚಿದರು
ನಿಮ್ಮ ಸರ್ವಸ್ವವನ್ನು ತ್ಯಾಗ ಮಾಡಿ
ನಿಸ್ವಾರ್ಥ ಸೇವೆಯನ್ನು ನೀಡಿ
ಆ ಒಡಲಿಗೆ ಹಾಲೆರೆದು
ಶಾಂತಿಗೊಳಿಸುವ
ವೀರ ಯೋಧರೇ ನಿಮಗೊಂದು ನನ್ನ ಸಲಾಂ
ದೇಶಕ್ಕಾಗಿ ಪ್ರಾಣತೆತ್ತು
ಹಗಲಿರಳು ನಿದ್ದೆ ಬಿಟ್ಟು
ಶತ್ರುಗಳ ಹಾವಳಿಯನ್ನು ಹತ್ತಿಟ್ಟು
ನಿಮ್ಮ ಪ್ರಾಣವನ್ನು ಒತ್ತೆ ಇಟ್ಟು
ಮಡಿದ ವೀರ ಯೋಧರೆ ನಿಮ್ಮ ತ್ಯಾಗ ಬಲಿದಾನಕ್ಕೆ ನಿಮಗೊಂದು ನನ್ನ ಸಲಾಂ
ಪ್ರವಾಸಿಗರ ಸ್ವರ್ಗ ತಾಣ ಪೆಹೆಲ್ಗಾಂ
ಹಿಮಗಿರಿಯ ಮಲ್ಲಿಗೆ ಶೃಂಗಾರ ಮುಕುಟಂ
ಅ ಸೌಂದರ್ಯವೇ ಮುಳುವಾಗಿದೆ ಈ ನೆಲಕ್ಕೆ
ಮುತ್ತೈದೆಯರ ಸಿಂಧೂರ
ಅಳಿಸಿ ಹಾಕಿದರು ಉಗ್ರಗಾಮಿಗಳು
ಸಿಂಧೂರ ಆಪರೇಷನ್ ಹೆಸರಿನಲ್ಲಿ
ಉಗ್ರಗಾಮಿಗಳ ನೆಲೆಯನ್ನೇ ಧ್ವಂಸಗೊಳಿಸಿದ ವೀರಯೋಧರೆ ನಿಮಗೊಂದು ನನ್ನ ಸಲಾಂ
ಹಿಂದೆ ಕಾರ್ಗಿಲ್ ದಲ್ಲಿ ಸೋತು ಪೆಟ್ಟು ತಿಂದು
ಓಡಿದರೂ ಹೇಡಿಗಳು
ಆದರೂ ಬುದ್ಧಿ ಬಾರದ ಪಾಪಿಗಳು
ಅದಕ್ಕೆ ತಕ್ಕ ಉತ್ತರ ಕೊಟ್ಟ ಭಾರತದ ವೀರ ಯೋಧರು
ನಿಮಗೊಂದು ನನ್ನ ಸಲಾಂ
ಭಾರತದ ರಕ್ಷಣೆಗೆ ರಾಮ ಲಕ್ಷ್ಮಣರಿವರು
ನುಡಿದಂತೆ ನಡೆಯುವ ಭೀಮಾರ್ಜುನರು
ನೊಂದ ಭಾರತೀಯರ ಆಶಾಕಿರಣರು
ವೀರ ಯೋಧರೇ
ನಿಮಗೊಂದು ನನ್ನ ಸಲಾಂ
ಭಾರತದ ಮೇಲೆ ಮತ್ತೆ ಮತ್ತೆ ಮಾಡಬೇಡಿ ದಾಳಿ ಏಕೆಂದರೆ
ಭಾರತದ ಸೈನಿಕರೇ ಚಂಡಮಾರುತ ಬಿರುಗಾಳಿ
ಬೀಸಿದರೆ ಉಳಿಯಲ್ಲ ವಿಶ್ವ ಭೂಪಟದಲ್ಲಿ ನಿಮ್ಮ ಹಾವಳಿ
ಭಾರತ ಸೈನಿಕರು ಎಡೆಮುರಿ ಕಟ್ಟಿ ಬಿಸಾಡುವರು ಇಲ್ಲಿ
ವೀರಯೋಧರೆ ನಿಮಗೊಂದು ನನ್ನ ಸಲಾಂ
ವಂದೇ ಮಾತರಂ ಮಂತ್ರ ಪಠಿಸುತ್ತಾ
ಎದೆ ಉಬ್ಬಿಸಿ ಗಡಿಯಲ್ಲಿ ಸಿಂಹದಂತೆ ಗರ್ಜಿಸುತ್ತಾ
ಭಾರತ್ ಮಾತಾ ಕಿ ಜೈ ಎನ್ನುತ್ತಾ ಸಂಭ್ರಮದಿ ಹೇಳೋಣ ವೀರಯೋಧರೇ ನಿಮಗೊಂದು ನನ್ನ ಸಲಾಂ
✍️ ಬಡಿಗೇರ್ ಜಿಲಾನಸಾಬ್
